ಹುಬ್ಬಳ್ಳಿ:
ಬೆಂಗಳೂರು – ಧಾರವಾಡ ನಡುವೆ ಹೊಸದಾಗಿ ಆರಂಭವಾಗಿರುವ “ವಂದೇ ಭಾರತ್” ರೈಲಿನ ಸಮಯಕ್ಕೆ ಹೊಂದಾಣಿಕೆ ಆಗುವಂತೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ವೋಲ್ವೋ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಗೆ ಬೆಂಗಳೂರು ಧಾರವಾಡ ನಡುವೆ ಆರಂಭಿಸಲಾಗಿರುವ “ವಂದೇ ಭಾರತ್ ” ರೈಲಿನಲ್ಲಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಲ್ಟಿ ಆ್ಯಕ್ಸೆಲ್ ವೋಲ್ವೊ ಎಸಿ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣಕ್ಕೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರೈಲಿನ ಆಗಮನ – ನಿರ್ಗಮನ ಸಮಯಕ್ಕೆ ಅನುಗುಣವಾಗಿ ಈ ಬಸ್ಸುಗಳು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
*ವೋಲ್ವೊ ಎಸಿ ಬಸ್ಸು* ಒಂದು ಬಸ್ಸು ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಿಗ್ಗೆ 11-30ಕ್ಕೆ ಹೊರಡುತ್ತದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 1-30ಕ್ಕೆ ತಲುಪುತ್ತದೆ. ಇನ್ನೊಂದು ಬಸ್ಸು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 11-00 ಕ್ಕೆ ಹೊರಡುತ್ತದೆ. ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1-10ಕ್ಕೆ ಆಗಮಿಸಲಿದೆ.
ಪ್ರಯಾಣ ದರ ರೂ.180 ನಿಗದಿಪಡಿಸಲಾಗಿದೆ.
*ರಾಜಹಂಸ ಬಸ್ಸು*
ಒಂದು ಬಸ್ಸು ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ 12-25ಕ್ಕೆ ಹೊರಡುತ್ತದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ 1-55ಕ್ಕೆ ತಲುಪುತ್ತದೆ.
ಇನ್ನೊಂದು ಬಸ್ಸು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 11-20ಕ್ಕೆ ಹೊರಡುತ್ತದೆ. ಧಾರವಾಡ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12-50ಕ್ಕೆ ಆಗಮಿಸಲಿದೆ.
ಪ್ರಯಾಣ ದರ ರೂ.135 ನಿಗದಿಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಬಸ್ಸುಗಳ ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.