ಮುರಗೋಡ:
ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ನಿಮಿತ್ತ ಭಾನುವಾರ ನಾನಾ ಗ್ರಾಮದ
ಪಲ್ಲಕ್ಕಿಗಳ ಉತ್ಸವ ಮೆರವಣಿಗೆ ಸುಮಂಗಲೆಯರ ಆರತಿ,
ಕುಂಭಮೇಳ, ಡೊಳ್ಳು ಕುಣಿತ, ಭಂಡಾರ ಎರಚಾಟದೊಂದಿಗೆ
ಸಂಭ್ರಮದಿಂದ ನೆರವೇರಿತು.
ಪಲ್ಲಕ್ಕಿ ಉತ್ಸವ ಸಂಚರಿಸುವಾಗ ಭಕ್ತರು ನಾನಾ ಜಯಘೋಷದ
ಝೇಂಕಾರ ಮೊಳಗಿಸಿದರು. ಪಲ್ಲಕ್ಕಿ ಉತ್ಸವ ಮೆರವಣಿಗೆ ಶ್ರೀ
ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದಿಂದ ಗ್ರಾಮದ
ನಾನಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಲ್ಲಕ್ಕಿಗೆ ಭಕ್ತರಿಂದ ನೀರು ಸುರಿದು ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿ, ಸಕ್ಕರೆ-ಬೆಲ್ಲ
ಹಾಗೂ ಬಾಳೆಹಣ್ಣು ನೇವೈದ್ಯ ಅರ್ಪಿಸುವುದು ಸಾಮಾನ್ಯವಾಗಿತ್ತು.
ಜಾತ್ರೆ ನಿಮಿತ್ತ ವಿಶೇಷ ಪೂಜೆ, ಮಹಾ ರುದ್ರಾಭಿಶೇಷೇಕ,
ಮಂತ್ರಪಠಣ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ, ನೇವ್ಯದ್ಯ, ತೀರ್ಥಪ್ರಸಾದ ವಿತರಣೆ, ಸೇವೆ
ಸಲ್ಲಿಸಿದ ಭಕ್ತರ ಸನ್ಮಾನ ಸೇರಿದಂತೆ ನಾನಾ ಧಾರ್ಮಿಕ ಹಾಗೂ ಇತರ ಮನರಂಜನಾ ಕಾರ್ಯಕ್ರಮ ನಡೆದವು. ಹಿರೇಬೂದನೂರ, ತಡಸಲೂರ, ವಣ್ಣೂರ, ಕುಟರನಟ್ಟಿ, ಚಿಕ್ಕಬೂದನೂರ, ಓಬಲದಿನ್ನಿ,
ಮಳಗಲಿ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು
ಮಹಾ ಪ್ರಸಾದ ಸ್ವೀಕರಿಸಿ ಸಂತೃಪ್ತರಾದರು.
ತವಗಮಠದ ಶ್ರೀ ಬಾಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಸೂರಣ್ಣವರ, ಪಿಡಿಒ ಜಿ.ಎಂ.
ಗಿರೆನ್ನವರ, ಮೋಹನಗೌಡ ಪಾಟೀಲ, ಯಲ್ಲಪ್ಪ ನಾಯ್ಕರ ನೇತೃತ್ವ ವಹಿಸಿದ್ದರು.
ಸಾಮಾಜಿಕ ಮುಖಂಡ ಫಕೀರಗೌಡ ಮುದಿಗೌಡರ, ಶಿವು ದಳವಾಯಿ, ಕಾರ್ತಿಕ ಪಾಟೀಲ, ಬಸವರಾಜ ತಟ್ಟಿಮನಿ, ವಿನಾಯಕ
ಚಿಕ್ಕಮಠ, ಚೇತನ ಕುರಬೆಟ್, ಗೋಪಾಲ ಮಲಕಾಜನವರ,
ರಾಜು ಮರಮಣ್ಣವರ, ಮಂಜುಳಾ ನಾಯ್ಕರ, ರಾಯಪ್ಪ ಹುಣಶೀಕಟ್ಟಿ, ಬಾಳೇಶ ಮೆಟಗುಪ್ಪಿ, ಸೋಮಪ್ಪ ಮಳಗಲಿ, ವೀರಪ್ಪ ಉಣ್ಣಿ, ನಾಗಪ್ಪ ಮಿಜ್ಜಿ, ಈರಪ್ಪ ಗೊಡಚಿ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.