ತಹಶಿಲ್ದಾರ ಕುಲಕರ್ಣಿ ನಿವೃತ್ತಿ..!
ಗೆಳೆಯ ಮಣ್ಣಿಕೇರಿ ಅಗಲಿಕೆಯಿಂದಾಗಿ ಸನ್ಮಾನಗಳಿಂದ ದೂರ ಉಳಿದ RK..!
ಬೆಳಗಾವಿ : ಸುಳೇಭಾವಿ, ಹುದಲಿ, ಕಣಬರ್ಗಿ, ಕಾಕತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ತಲಾಠಿಯಾಗಿ
ಉಚಗಾಂವ, ಕಿತ್ತೂರ ಸೇರಿ ಹಲವೆಡೆ ಕಂದಾಯ ನಿರೀಕ್ಷಕರಾಗಿ
ಬೆಳಗಾವಿ ಎಸಿ, ಡಿಸಿ, ಆರ್ ಸಿ ಕಚೇರಿ ಹಾಗೂ ಬೆಳಗಾವಿ ತಹಶಿಲ್ದಾರರಾಗಿ ಕಂದಾಯ ಇಲಾಖೆಯಲ್ಲಿ ತಲಾಠಿಯಿಂದ ಹಿಡಿದು ತಹಶಿಲ್ದಾರ ಹುದ್ದೆಯ ವರೆಗೆ 35 ವರ್ಷಗಳಿಗಿಂತ ಹೆಚ್ಚು ಕಾಲ ಸುಧೀರ್ಘವಾಗಿ ಸರ್ವೋತ್ತಮ ಸೇವೆ ಸಲ್ಲಿಸಿ ನಿನ್ನೆ ಶುಕ್ರವಾರ(30 ಜೂನ್ 2023) ರಂದು ಬೆಳಗಾವಿ ತಹಶಿಲ್ದಾರರಾಗಿದ್ದ RK ಕುಲಕರ್ಣಿ (ರಮೇಶ ಕೃಷ್ಣಾಜೀ ಕುಲಕರ್ಣಿ) ಸೇವಾ ನಿವೃತ್ತಿಯಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ಕುಲಕರ್ಣಿ ತಮ್ಮ ಸೇವಾವಧಿಯಲ್ಲಿ ಜನರ ಕಷ್ಟ ಕಾರ್ಪನ್ಯಗಳಿಗೆ ಶಕ್ತಿ ಮೀರಿ ಸ್ಪಂದಿಸಿ ಕೆಲಸ ಮಾಡಿ ಜನಪ್ರೀಯ ಅಧಿಕಾರಿಯಾಗಿದ್ದರು.
ಸದ್ಯಕ್ಕೆ ಸ್ವೀಕರಿಸುತ್ತಿಲ್ಲ ಸನ್ಮಾನ..!
ನಿವೃತ್ತಿಯಾಗಿರುವ ಜನಪ್ರೀಯ ಅಧಿಕಾರಿಯ ಸೇವಾ ನಿವೃತ್ತಿಯನ್ನು ಅದ್ದೂರಿ ದಿನದ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಅವರ ಅಭಿಮಾನಿಗಳು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಯೋಜನೆ ಹಾಕಿಕೊಂಡಿದ್ದರು. ಆದರೆ ಇದಕ್ಕೆ ತಹಶಿಲ್ದಾರ ಕುಲಕರ್ಣಿ ಒಪ್ಪಿಗೆ ನೀಡದೇ ಹಿನ್ನಲೆಯಲ್ಲಿ ಅವರ ಸೇವಾ ನಿವೃತ್ತಿ ಅಂಗವಾಗಿ ಯಾವುದೇ ಕಾರ್ಯಕ್ರಮಗಳಾಗಲಿ, ಸನ್ಮಾನ ಸಮಾರಂಭಗಳು ಸದ್ಯಕ್ಕೆ ನಡೆಯಿತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಅಶೋಕ ಮಣ್ಣಿಕೇರಿ ಅವರ ಅಗಲಿಕೆ.
ಆರ್ ಕೆ ಕುಲಕರ್ಣಿ ಹಾಗೂ ಅಶೋಕ ಮಣ್ಣಿಕೇರಿ ಅತ್ಯಾಪ್ತರಾಗಿದ್ದರು. ಮಣ್ಣಿಕೇರಿ ಹಠಾತ್ ನಿಧನದಿಂದ ನೊಂದಿದ್ದು ಸದ್ಯಕ್ಕೆ ಯಾವುದೇ ಸನ್ಮಾನಗಳನ್ನು ಸ್ವೀಕರಿಸಲು ಕಡಾಖಂಡಿತವಾಗಿ ತಿರಸ್ಕರಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ತಹಶಿಲ್ದಾರ ಕುಲಕರ್ಣಿ ಅವರನ್ನು ಸನ್ಮಾನಿಸಲು ಅನೇಕ ಸಂಘಟನೆಗಳು, ಸಂಸ್ಥೆಗಳು ಮತ್ತು ಇಲಾಖೆಯವರು ಯೋಜನೆ ರೂಪಿಸಿದ್ದು ಅವರಿಗೆ ಮಂದಿನ ದಿನಗಳಲ್ಲಿ ಸಮಯ ನೀಡಾಲಾಗುವುದು ಅಲ್ಲಿಯವರೆಗೆ ಎಲ್ಲರೂ ಸಹಕರಿಸಬೇಕೆಂದು ಅವರ ಆಪ್ತರು ಪತ್ರಿಕೆಗೆ ತಿಳಿಸಿದ್ದಾರೆ.