ಬೆಳಗಾವಿ:
ಶಿಶು ಅಭಿವೃದ್ಧಿ ಯೋಜನೆ ಬೆಳಗಾವಿ (ನಗರ) ವ್ಯಾಪ್ತಿಯಲ್ಲಿ ಖಾಲಿ ಇರುವ ೩೩ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್-ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜು. ೧೯ ೨೦೨೩ ರಂದು ಸಾಯಂಕಾಲ ೫-೩೦ ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ನಗರ ಪ್ರದೇಶಗಳಲ್ಲಿ ಅದೇ ವಾರ್ಡಿನ ಇಚ್ಛೆಯುಳ್ಳ ಮಹಿಳಾ ಅಭ್ಯರ್ಥಿಗಳು ಎಲ್ಲ ದಾಖಲಾತಿಗಳನ್ನೋಳಗೊಂಡ ಅರ್ಜಿಯನ್ನು ಬೆಳಗಾವಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲ ಭವನ ಕಟ್ಟಡ, ಶ್ರೀನಗರ ಕಛೇರಿಗೆ ಖುದ್ದಾಗಿ ಬಂದು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬೆಳಗಾವಿ (ನಗರ) ಯೋಜನೆಯ ೩೩ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಇದರಲ್ಲಿ (೧) ಹಳೆ ಗಾಂಧಿನಗರ ೧೩೭, (೨) ಮದ್ರಾಸ ಸ್ಟ್ರೀಟ್ ೧೯೪ (೩) ಬಾಂಧುರಗಲ್ಲಿ ೩೪೬, ಈ ಕೇಂದ್ರಗಳಲ್ಲಿ ವರ್ಗಾವಣೆಗಾಗಿ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಈ ೦೩ ಅಂಗನವಾಡಿ ಕೇಂದ್ರಗಳ ಅರ್ಜಿ ಅಹ್ವಾನವನ್ನು ತಾತ್ಕಾಲಿಕವಾಗಿ ರದ್ದುಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : ೦೮೩೧-೨೦೦೧೭೨೩ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.