ಬೆಳಗಾವಿ: ಜಿಲ್ಲಾ ತರಬೇತಿ ಸಂಸ್ಥೆ (DTI)ಯಲ್ಲಿ ಉಪಪ್ರಚಾರ್ಯೆ ಆಗಿರುವ ಬೆಳಗಾವಿಯ ನಾಗರತ್ನ ಪ್ರಭು ಹೂಗಾರ ಈಗ ಪ್ರಾಚಾರ್ಯರಾಗಿ ಪದೋನ್ನತಿ ಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ DTI ನ ಮೂವರು ಉಪಪ್ರಾಚಾರ್ಯರಿಗೆ, ಪ್ರಾಚಾರ್ಯ ಹುದ್ದೆಗೆ ಪದೋನ್ನತಿ ಹೊಂದಲು ಅನುಮೋದನೆ ನೀಡಿದ್ದಾರೆ.
ಡಿಪಿಎಆರ್ ಅಧೀನ ಕಾರ್ಯದರ್ಶಿ ವೈ. ಆರ್. ಜಾನಕಿ ಆದೇಶ ಹೊರಡಿಸಿದ್ದಾರೆ.
ನಾಗರತ್ನ ಹೂಗಾರ ಧಾರವಾಡದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.