ಬೆಳಗಾವಿ:ಜನಾನುರಾಗಿ ನೌಕರನಾಗಿ ಹೆಸರು ಪಡೆದಿದ್ದ ಕಂದಾಯ ಅಧಿಕಾರಿ ಅಶೋಕ ಮಣ್ಣಿಕೇರಿ(೪೫) ಇಂದು ಬೆಳಂಬೆಳಿಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ.
೨೫ವರ್ಷ ಮೇಲ್ಪಟ್ಟ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅಶೋಕ ತಹಶಿಲ್ದಾರ ಕಚೇರಿ ಎಸಿ, ಡಿಸಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಿ ಶಿರಸ್ತೇದಾರ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಕಾಲಿಕ ಸಾವಿಗೆ ಸರಕಾರಿ ನೌಕರರು, ಬಂಧು ಬಾಂಧವರು, ಗೆಳೆಯರು ದುಃಖ ವ್ಯಕ್ತಪಡಿಸಿದ್ದಾರೆ.