ಬೆಳಗಾವಿ :ದಿನಾಂಕಃ 27/೦6/2023 ರಂದು ಬೆಳಗಾವಿ ಬ್ರಹ್ಮನಗರದ ಮಾರುತಿ ಮಂದಿರ ಹತ್ತಿರ ದೇವರಾಜ ಬಾಳಪ್ಪ ಬಾಳೆಕುಂದ್ರಿ (23) ಸಾಃ ಬೆನಚಿನಮರಡಿ ತಾಃ ಬೈಲಹೊಂಗಲ, ಜಿಃ ಬೆಳಗಾವಿ ಎಂಬುವವನು ತನ್ನ ಸ್ವಂತ ಪಾಯ್ದೆಗೋಸ್ಕರ ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ಅಕ್ಕಿಯನ್ನು ಎಲ್ಲಿಂದಲೋ ಅಕ್ರಮವಾಗಿ ತೆಗೆದುಕೊಂಡು ತನ್ನ ಸ್ವಂತ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಟಾಟಾ ಕಂಪನಿಯ ಗೂಡ್ಸ್ ವಾಹನ ಸಂಖ್ಯೆಃ ಕೆಎ-29/4247 ರಲ್ಲಿ ಅಕ್ಕಿ ಸಾಗಿಸುತ್ತಿದ್ದಾಗ ಸಹಾಯಕ ನಿರ್ದೇಶಕರು, ಆಹಾರ ಮತ್ತು ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಕ್ಷೇತ್ರ ಬೆಳಗಾವಿ ಹಾಗೂ ಉದ್ಯಮಬಾಗ ಪೊಲೀಸ್ ಠಾಣೆ ಇವರ ತಂಡ ಜಂಟಿಯಾಗಿ ದಾಳಿ ಮಾಡಿ ಆರೋಪಿ-ದೇವರಾಜ ಬಾಳಪ್ಪ ಬಾಳೆಕುಂದ್ರಿ ಈತನಿಂದ ರೂ.1,71,150 /- ಮಾಲ್ಯದ 48 ಕ್ವಿಂಟಲ್ 90 ಕೆಜಿ ಅಕ್ಕಿಯನ್ನು ಮತ್ತು ಟಾಟಾ ಕಂಪನಿಯ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡು ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಉದ್ಯಮಬಾಗ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.