ಬೆಳಗಾವಿ:
ವಿಜಯಪುರದ ಅಂಜುಮನ್ ಕಾನೂನು ಕಾಲೇಜು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಪಂದ್ಯಾವಳಿಯಲ್ಲಿ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಪಡೆದರು.
ಬಾಲಕಿಯರ ವಿಭಾಗದಲ್ಲಿ ಅನುಷಾ ಮಮದಾಪುರ, ನಿಹಾರಿಕಾ ಪಾಟೀಲ, ವಿಶಾಖ ಧವಳಿ ಮತ್ತು ಶ್ರಿಯಾ ಜೋಗಿ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿದ್ದರು.
ಬಾಲಕರ ವಿಭಾಗದಲ್ಲಿ ಸಮರ್ಥ ಕುಲಕರ್ಣಿ ಪಂದ್ಯಾವಳಿಯಲ್ಲಿ ಅಕ್ಷಯ್ ಬಿ ಎಸ್, ನರೇಂದ್ರ ಬುರುಡ ಮತ್ತು ಸಚಿನ್ ಹಬದಮಠ ತೃತೀಯ ಸ್ಥಾನ ಪಡೆದರು.
ರಾಜಾ ಲಖಮಗೌಡ ಕಾನೂನು ಕಾಲೇಜು ಚೇರಮನ್ ಹಾಗೂ ನ್ಯಾಯವಾದಿ ಎಂ.ಆರ್.ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಎ.ಎಚ್.ಹವಾಲ್ದಾರ್, ಜಿಮಖಾನಾ ಒಕ್ಕೂಟದ ಅಧ್ಯಕ್ಷ ಪ್ರಸನ್ನಕುಮಾರ್ ಡಿ., ಕಾಲೇಜಿನ ದೈಹಿಕ ನಿರ್ದೇಶಕ ಅಮಿತ್ ಜಾಧವ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದರು.