ಬೆಳಗಾವಿ :
ಜಿಲ್ಲಾ ಖಜಾನೆ ಬೆಳಗಾವಿ ಕಾರ್ಯಾಲಯದಲ್ಲಿ ೦೧-ಬೆರಳಚ್ಚುಗಾರರ ಹುದ್ದೆ ಹಾಗೂ ಉಪ ಖಜಾನೆ ಅಥಣಿ ಮತ್ತು ಸಂಕೇಶ್ವರ ಕಾರ್ಯಾಲಯಗಳಲ್ಲಿ ಬೆರಳಚ್ಚುಗಾರ ಹಾಗೂ ಗ್ರೂಪ್-ಡಿ ಹುದ್ದೆಗಳು ಖಾಲಿ ಇದ್ದು, ಕಛೇರಿಗಳ ದೈನಂದಿನ ಕಾರ್ಯಕಲಾಪಗಳ ಹಿತದೃಷ್ಟಿಯಿಂದ ೦೧-ಡಿ.ಇ.ಓ/ಬೆರಳಚ್ಚುಗಾರ ಹಾಗೂ ೦೨-ಗ್ರೂಪ್-ಡಿ, ಹುದ್ದೆಗಳನ್ನು ಜು.೧೦ ೨೦೨೩ ರಿಂದ ಮಾ. ೩೧ ೨೦೨೪ ರ ವರೆಗೆ ಅಥವಾ ಸದರಿ ಖಾಲಿ ಇರುವ ಹುದ್ದೆ ಭರ್ತಿ ಆಗುವವರೆಗೆ ಹೊರಗುತ್ತಿಗೆಯ ಆಧಾರದ ಮೇಲೆ, ಬಾಹ್ಯ ಮೂಲಗಳಿಂದ ನೇಮಕ ಮಾಡಿಕೊಳ್ಳಲು ನೊಂದಾಯಿತ ಮಾನವ ಶಕ್ತಿ ಸಂಪನ್ಮೂಲ ಸಂಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಮಾನವ ಶಕ್ತಿ ಸಂಪನ್ಮೂಲ ಸಂಸ್ಥೆಗಳು ಜು.೭ ೨೦೨೩ ಮಧ್ಯಾಹ್ನ ೨ ಗಂಟೆಯ ಒಳಗಾಗಿ ನೇರವಾಗಿ ಅಥವಾ ಅಂಚೆ ಮೂಲಕ ಖಜಾನೆಗಳ ಜಂಟಿ ನಿರ್ದೇಶಕರ ಕಾರ್ಯಾಲಯ, ಜಿಲ್ಲಾ ಖಾಜನೆ ಕಚೇರಿ, ವಿಶ್ವೇಶ್ವರಯ್ಯ ನಗರ ಬೆಳಗಾವಿ, ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಖಜಾನೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.