ಬೆಳಗಾವಿ :
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರದಿಂದ ರಾಜ್ಯದ ವಿವಿಧ ಜಿಲ್ಲೆಯ ಸಾಹಿತಿಗಳ, ಸಾಧಕರ ಸಾಧನೆಗಳುಳ್ಳ ಕೈಪಿಡಿಯನ್ನು ಹೊತರಲಿದ್ದು, ಸಾಹಿತಿಗಳ ಮತ್ತು ಸಾಧಕರ ಸಾಧನೆಗಳನ್ನು ದಾಖಲಿಸಿ, ರಾಜ್ಯಮಟ್ಟದ ಮಾಹಿತಿಯ ಕೋಶ ಬಿಡುಗಡೆಗೊಳಿಸಲಿದ್ದಾರೆ.
ಆದ್ದರಿಂದ ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮತ್ತು ಸಾಧಕರು ತಮ್ಮ ಸಂಪೂರ್ಣ ಮಾಹಿತಿಯನ್ನು ವಿವರಗಳೊಂದಿಗೆ ಜೂ.೩೦ ೨೦೨೩ ರೊಳಗಾಗಿ ಸಲ್ಲಿಸಲು ಕೋರಲಾಗಿದೆ.
ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ವಿಜಯ ಇಂಡಸ್ಟ್ರಿಜ್ ಬೆಳಗಾವಿ ರಸ್ತೆ, ಬೈಲಹೊಂಗಲ-೫೯೧೧೦೨ ಬೈಲಹೊಂಗಲ ಅಥವಾ ಎಂ.ವೈ. ಮೆಣಸಿನಕಾಯಿ ಗೌರವಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್. ಮನೆ ಸಂಖ್ಯೆ: ೭೩೬೦, ಸೆಕ್ಟರ್ನಂ:೧೦, ಆಂಜನೇಯನಗರ ಬೆಳಗಾವಿ-೫೯೦೦೧೭ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲೆ ಸಾಹಿತ್ಯ ಪರಿಷತ್,ಮೊ : ೯೪೪೮೬೩೪೨೦೮, ೯೦೩೫೪೧೯೭೦೦, .ನಂ.೯೪೪೯೨೦೯೫೭೦ / ೯೪೪೮೩೭೨೪೧೧ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.