ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಯಾಕೆ ಮೊಬೈಲ್ ಉಪಯೋಗ ಮಾಡುತ್ತಿಲ್ಲ ಎಂಬ ವಿಷಯದ ಹಿಂದಿನ ಕಾರಣ ಬಹಿರಂಗ ಪಡಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಕ್ಷೇಮವನದಲ್ಲಿ ಇಂದಿನಿಂದ ಆರಂಭವಾದ ನೂತನ ಶಾಸಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ಅವರು ಅಲ್ಲಿ ನೂತನ ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ತಮ್ಮ ರಾಜಕೀಯ ಜೀವನದ ಕ್ಷಣಗಳನ್ನ ಮೆಲುಕು ಹಾಕಿದರು. ಈ ವೇಳೆ ಶಾಸಕರೊಬ್ಬರು ನೀವು ಯಾಕೆ ಮೊಬೈಲ್ ಉಪಯೋಗ ಮಾಡುವುದಿಲ್ಲ ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು ಮೊಬೈಲ್ ಬಂದ ಹೊಸತರಲ್ಲಿ 6 ತಿಂಗಳು ಮೊಬೈಲ್ ಫೋನ್ ಇಟ್ಟುಕೊಂಡಿದ್ದೆ. ಆದರೆ ಜನರು ಮಧ್ಯರಾತ್ರಿ ಕರೆ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ಕೆಲವರು ರಾತ್ರಿ ಕರೆ ಮಾಡುತ್ತಿದ್ದರು. ಹೀಗಾಗಿ ಮೊಬೈಲ್ ಎಸೆದು ಬಿಟ್ಟೆ ಎಂದು ಮೊಬೈಲ್ ಉಪಯೋಗ ಮಾಡದ ಹಿಂದಿನ ಕಥೆ ಹೇಳಿದರು.
ಈಗ ನನ್ನ ಸಂಪರ್ಕಕ್ಕೆ ನನ್ನ ಪಿಎಗಳ ನಂಬರ್ ಕೊಡುತ್ತೇನೆ. ಅವಶ್ಯಕತೆ ಇದ್ದಾಗ ಪಿಎಗಳ ಮೊಬೈಲಿನಿಂದ ಕರೆ ಮಾಡುತ್ತೇನೆ. ನಾನು ಮೊಬೈಲ್ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.