ಕಿತ್ತೂರು :
ಬಿಜೆಪಿ ಈ ಬಾರಿ ಅವಕಾಶ ನೀಡಿದರೆ ನಾನು ಕೆನರಾ ಲೋಕಸಭಾ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವೆ ಎಂದು ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶಾಮ ಸುಂದರ್ ಗಾಯಕ್ವಾಡ್ ಹೇಳಿದರು. ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಸ್ಪರ್ಧೆ ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ನಾನು ಕ್ಷೇತ್ರದ ಹಲವಾರು ಮುಖಂಡರ ಜೊತೆ ಚರ್ಚಿಸಿದ್ದು, ಅನಂತ್ ಕುಮಾರ್ ಹೆಗಡೆ ಅವರು ಈ ಸಲ ಸ್ಪರ್ಧಿಸದೆ ಇರುವುದು ಅನುಮಾನವಾಗಿದ್ದರಿಂದ ಪಕ್ಷ ನನ್ನನ್ನು ಗುರುತಿಸಲಿದೆ ಎಂಬ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.