ಪಾಟ್ನಾ :
ಪಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲಹೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ಆದಷ್ಟು ಬೇಗ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ನೀವು ಹೇಳಿದ ಮೇಲೆ ಅದು ಆಗುತ್ತದೆ ಎಂದು ಉತ್ತರ ನೀಡಿದ್ದಾರೆ.
ನಮ್ಮ ಮಾತು ಕೇಳಿ. ನೀವು ಮದುವೆಯಾಗಿ. ನೀವು ಮದುವೆಯನ್ನು ನಿರಾಕರಿಸುವುದಕ್ಕೆ ನಿಮ್ಮ ತಾಯಿ ಆತಂಕ ಕೊಳ್ಳುತ್ತಿದ್ದಾರೆ. ನಿಮ್ಮ ಮದುವೆಯ ಮೆರವಣಿಗೆಯಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಎಂದು ಲಾಲು ಪ್ರಸಾದ್ ಹೇಳಿದರು. ಇದಕ್ಕೆ ನಾಚಿಕೊಂಡ ರಾಹುಲ್ ಗಾಂಧಿ ಅವರು ನೀವು ಹೇಳಿದ ಮೇಲೆ ಅದು ಆಗುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.