ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಗೋಕಾಕ ತಾಲೂಕಿನ ಅಂಕಲಗಿಯವರಾದ ಅಶೋಕ ದುಡಗುಂಟಿ ಅವರು ಜನ ಸ್ನೇಹಿಯಾಗಿ ಕೆಲಸ ಮಾಡಿ ಬೆಳಗಾವಿ ಜನತೆಯ ವಿಶ್ವಾಸಕ್ಕೆ ಪಾತ್ರರಾದ ಅಧಿಕಾರಿಯಾಗಿದ್ದಾರೆ. ಇದೀಗ ರಾಜ್ಯ ಸರಕಾರ ಮತ್ತೆ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಿರುವುದು ಬೆಳಗಾವಿ ಅಭಿವೃದ್ಧಿ ದಿಸೆದಲ್ಲಿ ಹೊಸ ಹೆಜ್ಜೆಯಾಗಿದೆ.
2019 ರಲ್ಲಿ ಅಗಸ್ಟ ನಿಂದ 2 ತಿಂಗಳವರೆಗೆ ಪಾಲಿಕೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವಿದೆ. ಬೆಳಿಗ್ಗೆ ಎದ್ದು ಕಸ ವಿಲೆವಾರಿ ಮುತವರ್ಜಿ ವಹಿಸಿದ್ದು ಅವರ ಕಾಯಕನಿಷ್ಠೆಗೆ ಹಿಡಿದ ಕನ್ನಡಿ. ಮಳೆಗಾಲದಲ್ಲಿ ಒಡೆದ ಒಡ್ಡುಗಳನ್ನು ಮುಚ್ಚಿಸುವಿಕೆ, ನಾಲಾ ಮೇಲೆ ಅಕ್ರಮವಾಗಿ ಕಟ್ಟಿದ ಟಿಳಕವಾಡಿಯ ಶೀತಲ ರಸವಂತಿ ಗೃಹವನ್ನು ಯಾರಗೂ ಮಣಿಯದೇ ತೆರವುಗೊಳಿಸಿದ್ದರು. ಆಗ ನಗರದ ಒಬ್ಬ ಶಾಸಕರ ವಿರೋಧ ದಿಂದ ಎತ್ತಂಗಡಿಗೆ ಒಳಗಾಗಿದ್ದು ಕೂಡ ಇಲ್ಲಿ ಉಲ್ಲೇಖನೀಯ. ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
ರುದ್ರೇಶ ಘಾಳಿ ಅವರ ಜಾಗಕ್ಕೆ ರಾಜ್ಯ ಸರ್ಕಾರ ಇದೀಗ ಅಶೋಕ ದುಡಗುಂಟಿ ಅವರನ್ನು ನೇಮಕ ಮಾಡಿದೆ. ಅಶೋಕ ದುಡಗುಂಟಿ ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಹಾಗೂ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅದರಂತೆ ಕಲ್ಮೇಶ ಬಿ. ಅವರನ್ನು ಬೆಳಗಾವಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.