ದಂಪತಿಗಳ ಮೇಲೆ ಹರಿಹಾಯ್ದ ಟಿಪ್ಪರ್, ಪತ್ನಿ ಸಾವು, ಗಾಯಗೊಂಡ ಪತಿ..!
ಹಪ್ತಾ ಕೊಟ್ಟು ಅಕ್ರಮವಾಗಿ ರಾಜರೋಷವಾಗಿ ಟಿಪ್ಪರ್ ಚಲಾಯಿಸುತ್ತಿರುವ ಚಾಲಕರು..?
ಬೆಳಗಾವಿ :ಟಿಪ್ಪರನಲ್ಲಿ ಅಕ್ರಮವಾಗಿ ಮಣ್ಣು ತುಂಬಿಕೊಂಡು ಚಾಲಕನೊರ್ವ ಬೆಜವಾಬ್ದಾರಿಯಿಂದ ರಾಜಾರೋಷವಾಗಿ, ವೇಗವಾಗಿ ಚಲಾಯಿಸಿಕೊಂಡು ಹೊಗುತ್ತಿರುವಾಗ ಮುಂದೆ ದ್ವಿಚಕ್ರ ವಾಹನದ ಮೇಲೆ ಸವಾರಿ ಮಾಡುತ್ತಿದ್ದ ದಂಪತಿಗಳ ಮೇಲೆ ಕ್ರೂರಿಯಂತೆ ಟಿಪ್ಪರ್ ಹಾಯಿಸಿ ಮಹಿಳೆಯ ಪ್ರಾಣ ತೆಗೆದು ತಿರುಗಿ ನೋಡದೆ ವಾಹನದೊಂದಿದೆ ಪರಾರಿಯಾಗಿರುವ ದುರ್ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಇಂದು ನಡೆದಿದೆ.
ಕುರಿಹಾಳ ಗ್ರಾಮದ ಇಮಾಮ್ ಝಾಸಿ ಎಂಬ ದಂಪತಿಗಳು ದ್ವಿಚಕ್ರವಾಹನದ ಮೇಲೆ ಕಾಕತಿ ಗ್ರಾಮದ ಕಡೆ ಹೊರಟಿದ್ದ ವೇಳೆ ದೇವಗಿರಿ ಗ್ರಾಮದ ಬಸ್ ನಿಲ್ದಾನದಲ್ಲಿ ಈ ಘಟನೆ ಸಂಭವಿಸಿದೆ.
ಕರಿಹಾಳ ಗ್ರಾಮದ 60 ವರ್ಷದ ಇಮಾಮ್ ಬಿ ಝಾಸಿ ಎಂಬಾಕೆ ಮೃತ ಮಹಿಳೆ.
ಅಪಘಾತ ಸಂಭವಿಸಿದ ಬಳಿಕ ಸ್ಥಳಕ್ಕೆ ಬಂದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮಹಿಳೆ ಮೃತ ದೇಹವನ್ನು ಶವಪರೀಕ್ಷೆಗೆ ರವಾನಿಸಿದ್ದಾರೆ.
ಟಿಪ್ಪರಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ರೊಚ್ಚಿಗೆದ್ದ ಜನತೆ..!
ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರೋಬ್ಬರಿ ನೂರಕ್ಕೂ ಹೆಚ್ಚು ಟಿಪ್ಪರಗಳಿವೆ. ಅದರಲ್ಲಿ ಅರ್ಧಕ್ಕೂ ಹೆಚ್ಚೂ ಅಕ್ರಮವಾಗಿ ಮರಳು, ಮಣ್ಣು, ಜಲ್ಲಿಕಲ್ಲಿ ಹಾಗೂ ಕಲ್ಲುಗಾರಿಕೆಯ ಸರಕುಗಳನ್ನು ಸಾಗಿಸುತ್ತಿವೆ. ಇದರಲ್ಲಿ ಬಹಳಷ್ಟು ಚಾಲಕರು
ಬಾಲಕಾರ್ಮಿಕರಿದ್ದರೆ ಇನ್ನೂಳಿದವರು ಚಾಲನಾ ಪರವಾನಿಗೆಯನ್ನು ಸಹ ಪಡೆದಿಲ್ಲ. ಇಂತಹ ಚಾಲಕರು ಪ್ರತಿ ವರ್ಷ ಬೆಜವಾಬ್ದಾರಿಯಾಗಿ ಚಾಲನೆಮಾಡುತ್ತ ಅಪಘಾತ ನಡೆಸಿ ಒಂಡೆರಡು ಜೀವಗಳನ್ನು ಸಾಯಿಸುತ್ತಿದ್ದಾರೆ. ಅದಲ್ಲದೆ ರಸ್ತೆ ಮೇಲೆ ಒಡಾಡುವ ಮೂಕ ಪ್ರಾಣಿಗಳನ್ನು ಲೆಕ್ಕವಿಲ್ಲದಷ್ಟು ಕೊಲೆ ಮಾಡುತ್ತಿದ್ದರೆ. ಇಷ್ಟಾದರೂ ಇವರಿಗೆ ಯಾರು ಕಡಿವಾಣ ಹಾಕುತ್ತಿಲ್ಲ. ಯಾಕೆಂದರೆ ಕಡಿವಾಣ ಹಾಕಬೇಕಿದ್ದ ಪೊಲೀಸರೇ ಹಪ್ತಾ ಪಡೆದು ಅವರನ್ನು ರಾಜಾರೋಷವಾಗಿ ಅಪಘಾತ ನಡೆಸಲು ಬಿಟ್ಟಿದ್ದಾರೆ ಎಂದು ಜನ ಕಡಾಖಂಡಿತವಾಗಿ ಹೇಳುತ್ತಿದ್ದಾರೆ.
ಇನ್ನಾದರೂ ಕಾಕತಿ ಪೊಲೀಸರು ಹಪ್ತಾ ದುರಾಸೆ ಬಿಟ್ಟು ಜನರ ಮತ್ತು ಮೂಕ ಜೀವಗಳ ಪ್ರಾಣ ತೆಗೆಯುತ್ತಿರುವ ಟಿಪ್ಪರ್ ಗಳ ಅಕ್ರಮ ದಂಧೆಂಯನ್ನು ಟೈಟ್ ಮಾಡುತ್ತಾರಾ ಎಂದು ಕಾದೂ ನೋಡಬೇಕು.