ಬೆಂಗಳೂರು :
ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಎರಡು ತಿಂಗಳ ಬಿಲ್ ಅನ್ನು ಒಟ್ಟಿಗೆ ನೀಡಿದ್ದರಿಂದ ಸಮಸ್ಯೆಯಾಗಿದೆ. ಮುಂದಿನ ತಿಂಗಳಿಂದ ಸರಿಹೋಗಲಿದೆ. ಆದರೆ, ವಿದ್ಯುತ್ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆದರೆ, ಇದಕ್ಕೆ ವಿರೋಧ ಮಾಡುತ್ತಿರುವ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಯಿಂದ ಜೂ.22ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಅದಕ್ಕಾಗಿ ಜಾಸ್ತಿ ಬಿಲ್ ಬಂದಿದೆ. ಮುಂದಿನ ತಿಂಗಳಿಂದ ಸರಿಯಾದ ಬಿಲ್ ಬರುತ್ತದೆ. ವಿದ್ಯುತ್ ದರ ಹೆಚ್ಚಳದಿಂದಾಗಿ ಎಫ್ಕೆಸಿಸಿಐ ಬಂದ್ ಗೆ ನಿರ್ಧಾರ ಮಾಡಿದೆ. ನಾನು ಎಫ್ಕೆಸಿಸಿಐ ನವರಿಗೆ ಇಂಧನ ಅಧಿಕಾರಿಗಳು ಕರೆಸಿ ಮಾತಾಡಿ ಎಂದು ಹೇಳಿದ್ದೇನೆ. ಮುಂದಿನ ತಿಂಗಳಿಂದ ಸಹಜ ಆಗಲಿದೆ. ಈಗ ಎರಡು ತಿಂಗಳ ದರ ಒಟ್ಟಿಗೇ ಹಾಕಿದಾರೆ. ಹಾಗಾಗಿ ಅವರಿಗೆ ವಿದ್ಯುತ್ ದರ ಭಾರವಾಗಿ ಕಾಣಿಸ್ತಿದೆ. ವಿದ್ಯುತ್ ದರ ಕಡಿಮೆ ಆಗಲ್ಲ. ನಾನು ಮತ್ತೊಮ್ಮೆ ಎಫ್ಕೆಸಿಸಿಐ ಸಿಬ್ಬಂದಿಯನ್ನು ಕರೆದು ಮಾತಾಡ್ತೀನಿ ಎಂದರು.