ಉಡುಪಿ :
ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ನೀಲಾವರದ ಶ್ರೀಮಠದ ಗೋಶಾಲೆ ಆವರಣದಲ್ಲಿರುವ ಸುಮಾರು 30 ರಿಂದ 35 ಅಡಿ ಎತ್ತರದ ಹಲಸಿನಮರ ಏರಿ ಹಲಸಿನ ಹಣ್ಣು ಕೊಯ್ದು ಗೋವುಗಳಿಗೆ ತಿನ್ನಿಸಿ ಸಂತಸಪಟ್ಟಿದ್ದಾರೆ.
ಹಲಸಿನಹಣ್ಣು ಆಗಿರುವುದು ಕಂಡು ಬಿಟ್ಟು ಹೆಗಲ ಮೇಲಿದ್ದ ಶಲ್ಯವನ್ನು ತಲೆಗೆ ಸುದ್ದಿ ಕಾವಿ ಪಂಚೆಯನ್ನು ಕಚ್ಚೆಯಂತೆ ಬಿಗಿದು ಕತ್ತಿ ಹಿಡಿದು ಮರ ಏರಿದ್ದಾರೆ. ಏಣಿ-ಹಗ್ಗ ಯಾವುದರ ಸಹಾಯವಿಲ್ಲದೆ ಮರವೇರಿ ಹಣ್ಣುಗಳನ್ನು ಕೊಯ್ದಿದ್ದಾರೆ. ಅವರ ಶಿಷ್ಯರು ಗುರುಗಳ ಅನಿರೀಕ್ಷಿತ ಸಾಹಸ ನೋಡಿ ತಬ್ಬಿಬಾದರು.
ಮರದಲ್ಲಿ ಮಾಗಿದ ಹಲಸಿನ ಹಣ್ಣುಗಳನ್ನು ಗಮನಿಸಿ ಹಣ್ಣಾಗಿರುವುದನ್ನು ಖಚಿತಪಡಿಸಿ 8 ರಿಂದ 10 ಹಣ್ಣನ್ನು ಕಿತ್ತು ಕೆಳಗೆ ಹಾಕಿದರು. ಉಳಿದ ಹಣ್ಣುಗಳನ್ನು ಗೋಶಾಲೆಯ ಗೋವುಗಳಿಗೆ ತಿನ್ನಿಸಿ ಸಂತಸ ಪಟ್ಟರು.