ಬೆಂಗಳೂರು:
ಆರು ಪತ್ರಕರ್ತರನ್ನು ‘ವಿಶ್ವ ಸಂವಾದ ಕೇಂದ್ರ’ (ವಿಎಸ್ಕೆ) ನೀಡುವ ಮಾಧ್ಯಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಜಾವಾಣಿ ಮುಖ್ಯ ವರದಿಗಾರ ರವಿಪ್ರಕಾಶ್ ಎಸ್. ಮತ್ತು ಸುವರ್ಣ ನ್ಯೂಸ್ನ ಜಯಪ್ರಕಾಶ್ ಶೆಟ್ಟಿ ಅವರು ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ, ಶಿವಮೊಗ್ಗದ ‘ಅಜೇಯ ಪತ್ರಿಕೆ’ ಎಂ. ಶ್ರೀನಿವಾಸನ್ ಅವರು ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ಹೊಸದಿಗಂತದ ಹೆಬ್ರಿ ಬಾಲಕೃಷ್ಣ ಮಲ್ಯ ಮತ್ತು ವಿಕ್ರಮ ವಾರಪತ್ರಿಕೆಯ ಕಾ. ರಮಾನಂದ ಆಚಾರ್ಯ ಅವರು ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ, ಮೀಡಿಯಾ ಮಾಸ್ಟರ್ಸ್ನ ಎಂ.ಎಸ್. ರಾಘವೇಂದ್ರ ಅವರು ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜೂನ್ 25ರಂದು ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ– ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.