ಬೆಂಗಳೂರು :
ಒಳ್ಳೆಯ ಹುಡುಗ ಬಿಗ್ ಬಾಸ್ ವಿನ್ನರ್ ಪ್ರಥಮ್ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ನಟ ಪ್ರಥಮ್ ಅವರ ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ . ಇದೀಗ ಆ ವಿಷಯ ಬಹಿರಂಗವಾಗಿದ್ದು , ಮಂಡ್ಯ ಮೂಲದ , ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿ ಭಾನುಶ್ರೀ ಅವರನ್ನು ಪ್ರಥಮ್ ಮದುವೆಯಾಗಲಿದ್ದಾರೆ . ಮಂಡ್ಯ ಪಕ್ಕದ ಹಳ್ಳಿಯೊಂದರಲ್ಲಿ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆದಿದೆ . ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತಿನಿ ಎನ್ನುತ್ತಿದ್ದರು . ಅದರಂತೆಯೇ ಪ್ರಥಮ್ ಮದುವೆ ಆಗುತ್ತಿದ್ದಾರೆ.
ಮಂಡ್ಯ ಬಳಿ ಹಳ್ಳಿಯಲ್ಲಿ ಎರಡು ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು ಭಾನುಶ್ರೀ ಡಿಗ್ರೀ ಮುಗಿಸಿ ಡಬ್ಬಲ್ ಡಿಗ್ರಿ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಬಡ ಕುಟುಂಬದ ಹುಡುಗಿಯನ್ನು ಒಳ್ಳೆಯ ಹುಡುಗ ಪ್ರಥಮ್ ಮದುವೆ ಆಗುತ್ತಿದ್ದು, ಈಗ ಎಲ್ಲೆಡೆ ಇವರಿಬ್ಬರ ಫೋಟೋ ವೈರಲ್ ಆಗುತ್ತಿದೆ.