ಬೆಂಗಳೂರು :
ಆಧಾರ್ ಕಾರ್ಡ್ ಪಡೆದು 10 ವರ್ಷ ದಾಟಿದವರಿಗೆ ಆಧಾರ್ನ ಕಡ್ಡಾಯ ನವೀಕರಣದ ಗಡುವು ನಾಳೆ ಕೊನೆಗೊಳ್ಳಲಿದೆ . ಜೂನ್ 14 ರೊಳಗೆ MY ಆಧಾರ್ ಪೋರ್ಟಲ್ನಲ್ಲಿ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು . ಆಧಾರ್ ಕಾರ್ಡ್ನಲ್ಲಿ ಹೆಸರು , ವಿಳಾಸ , ಜನ್ಮದಿನಾಂಕ , ಲಿಂಗ , ಫೋನ್ ಸಂಖ್ಯೆ , ಇ – ಮೇಲ್ ಇತ್ಯಾದಿಗಳನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು . ಫೋಟೋ , ಬಯೋಮೆಟ್ರಿಕ್ ವಿವರಗಳನ್ನು ಬದಲಿಸಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು . ಜೂ .15 ರ ಬಳಿಕ ಆಧಾರ್ ಅಪ್ಡೇಟ್ಗೆ 50 ರೂ . ಶುಲ್ಕವಿದೆ.