ರಸ್ತೆ ಮೇಲ್ಸೇತುವೆ ನಿರ್ಮಿಸಲು 2005 ರಲ್ಲಿ ಧರ್ಮಸಿಂಗ್ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರದಲ್ಲಿ
ಮಂತ್ರಿಯಾಗಿದ್ದ ಸತೀಶ ಜಾರಕಿಹೊಳಿ
ಅವರು 2016 ರ ಬಜೆಟ್ ನಲ್ಲಿ
ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು
ಮೀಸಲಿರಿಸುವಲ್ಲಿ ಯಶಸ್ವಿಯಾಗಿದ್ದರು.
ವ್ಹಿಟಿಯು ಅಭಿಯಂತರು ಡಿಜೈನ್
ಅಂತಿಮಗೊಳಿಸಿದ್ದರು.ಲೋಕೋಪಯೋಗಿ
ಇಲಾಖೆಯ ಅಧಿಕಾರಿಗಳು ಟೆಂಡರ್
ಕರೆಯಲು ಸಿದ್ಧತೆ ಮಾಡಿಕೊಂಡಿದ್ದರು.
ಸಂಕಮ್ ಹೊಟೆಲ್ ದಿಂದ ಚೆನ್ನಮ್ಮ
ವೃತ್ತದ ಮೂಲಕ ಬೋಗಾರ್ ವೇಸ್ವರೆಗೆ
2 ಕಿ.ಮೀ.ವರೆಗೆ ಮೆಲ್ಸೇತುವೆ ನಿರ್ಮಿಸಲು
ಯೋಜನೆ ರೂಪಿಸಲಾಗಿತ್ತು.ಆದರೆ
ಬೆಳಗಾವಿ ಉತ್ತರ ಶಾಸಕರು ಇದನ್ನು
ರದ್ದುಗೊಳಿಸಿ ನಗರದ ರಸ್ತೆ,ಚರಂಡಿಗಳಿಗಾಗಿ
ಕ್ರಿಯಾ ಯೋಜನೆ ತಯಾರಿಸಿಕೊಂಡರು.
2017 ರ ನವ್ಹೆಂಬರ್ 15 ರಂದು
ಬೆಳಗಾವಿಯ ಸರ್ಕೀಟ್ ಹೌಸ್ ನಲ್ಲಿ
ನಾವು ಸಿದ್ದರಾಮಯ್ಯ ಅವರನ್ನು ಭೆಟ್ಟಿಯಾಗಿ ಚರ್ಚಿಸಿದೆವು.ಅಂದು ಈ
ವಿಷಯವನ್ನೂ ಅವರ ಗಮನಕ್ಕೆ
ತಂದೆವು.ಬಜೆಟ್ ನಲ್ಲಿ ಮೀಸಲಿರಿಸಿದ್ದ
ಹಣದ ಉದ್ದೇಶ ಬದಲಾದ ಬಗ್ಗೆ ಅವರೂ
ಅಚ್ಚರಿ ವ್ಯಕ್ತಪಡಿಸಿದ್ದರು.ಆ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಮಂತ್ರಿ.
ಸತೀಶ ಜಾರಕಿಹೊಳಿ ಅವರು
ಈಗ ಮತ್ತೆ ಮೆಲ್ಸೇತುವೆ ಯೋಜನೆ ಜಾರಿಗೆ
ಮುಂದಾಗಿರುವದು ಸ್ವಾಗತಾರ್ಹ.ಇದರಿಂದ
ನಗರದಲ್ಲಿಯ ಸಂಚಾರ ದಟ್ಟಣೆಗೆ
ಪರಿಹಾರ ಸಿಗಲಿದೆ.
ಬೆಳಗಾವಿ ಜಿಲ್ಲಾಧಿಕಾರಿಗಳ
ಆವರಣದಲ್ಲಿ ಹಳೆಯ ಕಟ್ಟಡಗಳನ್ನು
ಕೆಡವಿ ಬೃಹತ್ ಬಹುಮಹಡಿ ಆಡಳಿತ
ಸೌಧ ನಿರ್ಮಾಣಕ್ಕೆ ಸಚಿವರು ಮುಂದಾಗಿದ್ದಾರೆ.2010 ರಿಂದಲೂ ಈ
ಯೋಜನೆಯು ನೆನೆಗುದಿಗೆ ಬಿದ್ದಿದೆ.ಇಲ್ಲಿ
ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳನ್ನು
ಸ್ಥಾಪಿಸಬಹುದಾಗಿದೆ.ಸುವರ್ಣ ಸೌಧಕ್ಕೆ
ಸ್ಥಳಾಂತರಿಸಲಾದ 23 ಕಚೇರಿಗಳನ್ನು
ಮರಳಿ ನಗರಕ್ಕೆ ತರಬಹುದಾಗಿದೆ.ಈ
ಬಹುಮಹಡಿ ಕಟ್ಟಡ ಕಟ್ಟಲು ಬೆಳಗಾವಿಯಲ್ಲಿ ಇನ್ನೂ ಎರಡು
ಸ್ಥಳಗಳನ್ನು ನಾನು ಹಿಂದಿನ ಬೊಮ್ಮಾಯಿ
ಸರಕಾರದ ಗಮನಕ್ಕೆ ತಂದಿದ್ದೆ.
ಸಚಿವ ಸತೀಶ ಜಾರಕಿಹೊಳಿ
ಅವರ ಹೆಜ್ಜೆಗಳು ನಿಜಕ್ಕೂ ಸ್ವಾಗತಾರ್ಹ.
ಅಶೋಕ ಚಂದರಗಿ