⏩ ನ್ಯಾಯಾಲಯ ನೀಡಿತು ಬುಡಾ ಬುಡಕ್ಕೆ ಬಿಸಿಲಿನ ಝಳ…!
⏩ ಬುಡಾ ಬುಡಮೇಲು ಪ್ರಕರಣ, FIR ದಾಖಲಿಸಲು ಕೋರ್ಟ್ ಕಟ್ಟಪ್ಪಣೆ
⏩ ಸುದೀರ್ಘ ಹೋರಾಟದ ಪ್ರಥಮ ಜಯ ಕಂಡ ರಾಜೀವ ಟೋಪಣ್ಣವರ.
⏩ ಅಕ್ರಮ ಸೈಟ್ ಪಡೆದ ಕಿರಾತಕರಿಗೆ ನಡುಕ…!
⏩ ರಾಜಕೀಯ ನೇತಾರನ ಒಲೈಕೆಗೆ ಮಾಡಿದ ಪಾಪ, ಅಧಿಕಾರಿಗೆ ಪ್ರಾಣಸಂಕಟ..!!
⏩ ಮ್ಯಾನ್ಯುಲ್ ಹರಾಜು ಮೂಲಕ ಸರಕಾರಕ್ಕೆ 100ರಿಂದ 150ಕೋಟಿ ಲಾಸ್…!
ಜನ ಜೀವಾಳ ಸರ್ಚ್ ಲೈಟ್ : ಬೆಳಗಾವಿ: ಬುಡಾ ಬುಡಮೇಲು ಪ್ರಕರಣದ ಪ್ರಖಾಂಡ ಕಿರಾತಕರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಹೋರಾಡಿದ್ದ ಹೋರಾಟಗಾರ ರಾಜೀವ ಟೋಪಣ್ಣವರ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಳಗಾವಿ ಬುಡಾ ಕರ್ಮಕಾಂಡದ ವಿರುದ್ಧ ನಾಗರಿಕ ಆಡಳಿತ, ಪೊಲೀಸ್, ಲೋಕಾಯುಕ್ತ ಸೇರಿ ಕಂಡಕಂಡಲ್ಲಿ ಮನವಿ ಮಾಡಿದರೂ ಕ್ಯಾರೆ ಅನ್ನದೇ ರಾಜಕೀಯ ಬಲಿಪಶು ಆಗಿದ್ದ ಆಡಳಿತಾಂಗ ವ್ಯವಸ್ಥೆ ಹಾಗೇ ಮುನ್ನಡೆದಿತ್ತು.
ಲೋಕಾಯುಕ್ತರು ತನಿಖೆ ನಡೆಸಿದ್ದರೂ ಸಹ ತನಿಖೆ ಮಂದಗತಿಯಿಂದ ಸಾಗಿದ್ದ ಬಗ್ಗೆ ರಾಜೀವ ಟೋಪಣ್ಣವರ ಬೆಳಗಾವಿ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ಮುಂದೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಕಮಿಷ್ನರ್ ಪ್ರೀತಂ ನಸಲಾಪುರೆ ವಿರುದ್ಧ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಲೋಕಾಯುಕ್ತ ಡಿಎಸ್ಪಿಗೆ ವಿಚಾರಣೆ ನಡೆಸಿ ಜುಲೈ 7ರ ಒಳಗೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಬುಡಾ ಸೈಟಗಳ ಮ್ಯಾನ್ಯುಲ್ ಹಂಚಿಕೆ ಸೇರಿ ಹಲವು ಅಕ್ರಮಗಳ ಬಗ್ಗೆ ಮತ್ತು ಸರಕಾರಕ್ಕೆ 100ರಿಂದ 150 ಕೋಟಿ ರೂ. ಎಕರೆ ಹಾನಿ ಮಾಡಿದ ಬಗ್ಗೆ ರಾಜೀವ ಟೋಪಣ್ಣವರ ದೂರು ಸಲ್ಲಿಸಿದ್ದರು.
ಸರಕಾರ ಬುಡಾ ಅಕ್ರಮದ ಬಗ್ಗೆ ಸಿಓಡಿ ತನಿಖೆಗೆ ಒಪ್ಪಿಸುವ ಮೊದಲೇ ನ್ಯಾಯಾಲಯ ನಿರ್ದೇಶನದ ಅಡಿ ಕ್ರಮಆಗುತ್ತಿರುವುದು ಗಮನ ಸೆಳೆದಿದೆ. ಸಾರ್ವಜನಿಕರೇ, ಬುಡಾ ಸೈಟಗಳನ್ನು ಉಳ್ಳವರು ಎಲ್ಲರೂ ಸೇರಿಯೇ ಎಗರಿಸಿರುವಾಗ ಯಾರಿಗೆ ಯಾರ ಮೇಲೆ ದೂರು ಸಲ್ಲಿಸಿ ಪ್ರಯೋಜನವೇನು? ಎಂಬಂತಾಗಿತ್ತು.