ಬೆಂಗಳೂರು :
ವಾರ್ತಾ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕರಾಗಿ ಮಂಜುನಾಥ ಡೊಳ್ಳಿನ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಡಳಿತ ಶಾಖೆ ಉಪ ನಿರ್ದೇಶಕರಾಗಿರುವ ಮಂಜುನಾಥ ಡೊಳ್ಳಿನ ಅವರು ಆಡಳಿತ ಶಾಖೆ ಮತ್ತು ಸುದ್ದಿ ಮತ್ತು ಪತ್ರಿಕಾ ಶಾಖೆಯ ಪ್ರಭಾರ ಜಂಟಿ ನಿರ್ದೇಶಕರಾಗಿ ಅಧಿಕಾರಿ ವಹಿಸಿಕೊಂಡರು.
ಈ ಹಿಂದೆ ಧಾರವಾಡದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಮಂಜುನಾಥ ಡೊಳ್ಳಿನ ಅವರು ಕಳೆದ ವರ್ಷ ಉಪನಿರ್ದೇಶಕರಾಗಿ ಬಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.
ಉಪನಿರ್ದೇಶಕರುಗಳಾದ ಪಲ್ಲವಿ ಹೊನ್ನಾಪುರ ( ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆ,), ಸಿದ್ದೇಶ್ವರಪ್ಪ( ಕ್ಷೇತ್ರ ಪ್ರಚಾರ ಶಾಖೆ), ಸಿ.ಆರ್.ನವೀನ (ವಾಣಿಜ್ಯ ಪ್ರಚಾರ ಹಾಗೂ ಪ್ರಕಟಣೆ ಶಾಖೆ)ಪ್ರಭಾರ ಜಂಟಿ ನಿರ್ದೇಶಕರುಗಳಾಗಿದ್ದು, ಹಾಗೂ ರಾಮಲಿಂಗಪ್ಪ ಇವರು ವಾಣಿಜ್ಯ ಶಾಖೆ ಉಪನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.