ಬೆಳಗಾವಿ;
ಬೆಳಗಾವಿಯ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಚಾರ್ಯ ಡಾ. ಎ.ಎಚ್.ಹವಾಲ್ದಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ- ಬಲಿದಾನದ ತಿಳಿಸಿ, ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಪ್ರೊ.ಅಶ್ವಿನಿ ಪರಬ್, ಪ್ರೊ.ಚೇತನಕುಮಾರ್, ವಿದ್ಯಾರ್ಥಿಗಳಾದ ರಾಜ್ ಶಾ, ಸೌಮ್ಯಾ ಶೆಟ್ಟಿ, ಮಲಿಕಾರ್ಜುನ ಪೂಜಾರಿ, ಹಳೆ ವಿದ್ಯಾರ್ಥಿಗಳಾದ ಎಸ್.ಚವ್ಹಾಣ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮೃಣಾಲ್ ಕಾಮತ್ ಮತ್ತು ತ್ರಿವೇಣಿ ಖೋತ್ ಪ್ರಾರ್ಥಿಸಿದರು.
ಡಾ.ಪ್ರಸನ್ನ ಕುಮಾರ್ ಸ್ವಾಗತಿಸಿದರು.
ಪ್ರೊ ಮಾಧುರಿ ಕುಲಕರ್ಣಿ ವಂದಿಸಿದರು. ಪ್ರೊ.ಶಿಲ್ಪಾ ರಾಯ್ಕರ್ ನಿರೂಪಿಸಿದರು.
ಕಾಲೇಜಿನ ಜಿಮಖಾನಾ ಯೂನಿಯನ್ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.