ಬೆಳಗಾವಿ : ನಗರದ ಟಿಳಕವಾಡಿ ಆರ್ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಡಿ. 20, 21, 22, 23 ರಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ 6 ನೇ ಮಹಾ ಸಮಾರಾಧನಾ ಮಹೋತ್ಸವ ಆಯೋಜಿಸಲಾಗಿದೆ.
ಡಿ. 20 ರಂದು ಸಂಜೆ 4 ರಿಂದ 5:30 ರ ವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 5:45 ರಿಂದ 7 ರವರೆಗೆ ಸ್ವರ ನಿರಂತರ ತಂಡದವರಿಂದ ದಾಸವಾಣಿ, 7 ರಿಂದ 8 ರವರೆಗೆ ಮಂತ್ರಾಲಯ ಪಂಡಿತ್ ವೇಣುಗೋಪಾಲಾಚಾರ್ ಪುರೋಹಿತ ಅವರಿಂದ ಶ್ರೀಮದ್ ಭಾಗವತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ವಿಶಾಲ ಮನೋಭಾವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 21 ರಂದು ಸಂಜೆ 4 ರಿಂದ 5:30 ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 6 ಗಂಟೆಗೆ ಹರಿ ಭಜನೋಪಾಸಕ ತಂಡದಿಂದ ದಾಸವಾಣಿ, 7 ರಿಂದ 8 ಗಂಟೆವರೆಗೆ ಹುಬ್ಬಳ್ಳಿಯ ವಿದ್ವಾಂಸ ಸತ್ಯಮೂರ್ತಿ ಆಚಾರ್ಯ ಅವರಿಂದ ಶ್ರೀ ವಿಶ್ವೇಶ ತೀರ್ಥರ ದೃಷ್ಟಿಯಲ್ಲಿ ರಾಮಾಯಣ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 22 ರಂದು ಸಂಜೆ 4 ರಿಂದ 5: 30 ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ,
6-7 ಗಂಟೆವರೆಗೆ ರಾಗ ರಾಗಿಣಿ ತಂಡದಿಂದ ದಾಸವಾಣಿ, 7-8 ಗಂಟೆವರೆಗೆ ಶ್ರೀ ಭಾರತಿ ರಮಣಾಚಾರ್ಯ ಗಣಾಚಾರಿ ಅವರಿಂದ ಮಹಾಭಾರತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಪಂಚ ಪರ್ಯಾಯಗಳು ವಿಷಯವಾಗಿ ಪ್ರವಚನ ನಡೆಯಲಿದೆ.
ಡಿ. 23 ರಂದು ಬೆಳಗ್ಗೆ 6 ಕ್ಕೆ ಧನುರ್ಮಾಸ ಪೂಜೆ, 7:30 ಕ್ಕೆ ವಾಯುಸ್ತುತಿ ಪುನಶ್ಚರಣ ಹೋಮ, 10:30 ಕ್ಕೆ ವಿದ್ವಾಂಸರಿಂದ ಶಾಸ್ತ್ರಾನುವಾದ ಹಾಗೂ ಪ್ರವಚನ ನಡೆಯಲಿದೆ. ಮಧ್ಯಾಹ್ನ 12:30 ಕ್ಕೆ ರಥೋತ್ಸವ, ನೈವೇದ್ಯ, ಮಹಾ ಮಂಗಳಾರತಿ, 1 ಗಂಟೆಗೆ ತೀರ್ಥ ಪ್ರಸಾದ, ಸೇವಾ ಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98864 57735 ಮತ್ತು 9986 7798 78 ಇಲ್ಲಿಗೆ ಸಂಪರ್ಕಿಸಬಹುದು.


