ಹೊಸದಿಲ್ಲಿ: ದಸರಾ, ದೀಪಾವಳಿ ಹಾಗೂ ಸ್ಥಳೀಯ ಆಚರಣೆಗಳು ಸೇರಿದಂತೆ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಜನದಟ್ಟಣೆ ಉಂಟಾಗುವ ಕಾರಣ ಈ ದಸರಾ, ದೀಪಾವಳಿ, ದೇಶಾದ್ಯಂತ ಒಟ್ಟು 6,000 ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಬಿಲಾಖೆಯು ವ್ಯವಸ್ಥೆ ಮಾಡಿದೆ. ಇದರಿಂದ ಸುಮಾರು 1 ಕೋಟಿ ಅನುಕೂಲವಾಗಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್, ದುರ್ಗಾ ಪೂಜೆ, ದೀಪಾವಳಿ ಹಾಗೂ ಛತ್ ಹಬ್ಬಗಳ ಸಂದರ್ಭದಲ್ಲಿ ದೇಶದ ಆನೇಕ ಕಡೆಗಳಿಂದ ತನ್ನ ಊರುಗಳಿಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸಲು ಹಾಗೂ ದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಯಾಣಿಕರ ಅನುಕೂಲಕ್ಕಾಗಿ 108 ರೈಲುಗಳಿಗೆ ಹೆಚ್ಚುವರಿಯಾಗಿ ಸುಮಾರು 12,500 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ, ದುರ್ಗಾ ಪೂಜೆ ಹಾಗೂ ಹಬ್ಬಗಳಿಗೆ ತೆರಳುವವರಿಗೆ
ಹಬ್ಬಗಳ ಸಂದರ್ಭದಲ್ಲಿ ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮಾರ್ಗದ ರೈಲುಗಳಲ್ಲಿ ಹೆಚ್ಚಿನ ದಟ್ಟಗೆ ಉಂಟಾಗುತ್ತದೆ. ಕಳೆದ ವರ್ಷ ಈ ಸಂದರ್ಭದಲ್ಲಿ ಸಂಚರಿಸಿದ್ದವು. ಈ ವರ್ಷ ಒಟ್ಟು 5,975 ರೈಲುಗಳು ಸಂಚರಿಸಲಿವೆ ಎಂದರು. ಅ.2 ರಿಂದ ದುರ್ಗಾ ಪೂಜೆ ಆರಂಭ ವಾಗಲಿದ್ದು 31ರಂದು ದೀಪಾವಳಿ ಹಬ್ಬ ಹಾಗೂ ನ.7 ಮತ್ತು 8 ರಂದು ಛತ್ ಉತ್ಸವ ನಡೆಯಲಿದೆ.