ಬೆಳಗಾವಿ : ಗ್ರಾಮೀಣ ವಿಧಾನಸಭಾ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಒಟ್ಟು 6.50 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.
1 ಕೋಟಿ ರೂ. ವೆಚ್ಚದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ, 1.50 ಕೋಟಿ ರೂ ವೆಚ್ಚದಲ್ಲಿ ಗ್ರಾಮದೊಳಗಿನ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಜೊತೆಗೆ ಪೇವರ್ಸ್ ಅಳವಡಿಸುವ ಕಾಮಗಾರಿ ಹಾಗೂ 4 ಕೋಟಿ ರೂ. ವೆಚ್ಚದಲ್ಲಿ ಮಾಸ್ತಮರ್ಡಿ ಕ್ರಾಸ್ ನಿಂದ ತಾರಿಹಾಳ ಗ್ರಾಮದವರೆಗೆ ರಸ್ತೆಯ ಅಭಿವೃದ್ಧಿ ಜೊತೆಗೆ ರಸ್ತೆಯ ಅಗಲಿಕರಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನಡೆಸಲಾಯಿತು.
ಬಡೆಕೊಳ್ಳ ಮಠದ ಶ್ರೀ ಸದ್ಗುರು ನಾಗೇಂದ್ರ ಸ್ವಾಮಿಗಳು ಹಾಗೂ ಅಡವಿಸಿದ್ದೇಶ್ವರ ಮಠದ ಶ್ರೀ ಅಡವೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೂರ್ಯಾಜಿ ಪ ಜಾಧವ್, ಯಲ್ಲಪ್ಪ ಗೌಂಡಾಡಕರ್, ಪ್ರಮೋದ್ ಜಾಧವ್, ನಾಮದೇವ ಜೋಗಣ್ಣವರ, ನಾಗಪ್ಪ ತಳವಾರ, ಸವಿತಾ ಕೋಲಕಾರ, ಗಂಗವ್ವ ಪೂಜಾರಿ, ಗೀತಾ ತಳವಾರ, ಸಂಗೀತಾ ಭೂಮಣ್ಣವರ, ಗೀತಾ ಮುಚ್ಚಂಡಿ, ಸಾವಕ್ಕ ನಾಯಕ್, ಶ್ರೀ ರಾಮಲಿಂಗೇಶ್ವರ ದೇವರ ಸೇವಾ ಸಂಘ ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.