This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

5.75 ಕಿಲೋಗ್ರಾಂ ತೂಕದ ಗಂಟಿನ ಯಶಸ್ವಿ ಶಸ್ತ್ರ ಚಿಕಿತ್ಸೆ Successful surgical treatment of a 5.75 kg nodule


 

ಬೆಳಗಾವಿ :
ನಗರದ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಹೆಸರಾಂತ ತಜ್ಞೆ ಡಾ. ಗೀತಾಂಜಲಿ ತೋಟಗಿ ಅವರು ಸುಮಾರು 50 ವರ್ಷದ ಮಹಿಳೆಯು ತನ್ನ ಅಂಡಾಶಯದಲ್ಲಿ ಬೆಳೆದಿದ್ದ ಸುಮಾರು 30 ಸೆಂಟಿಮೀಟರ್ ಸುತ್ತಳತೆಯ 5.75 ಕಿಲೋಗ್ರಾಂ ತೂಕದ ಗಂಟನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಪ್ರಸ್ತುತ ಮಹಿಳೆಯು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧದ ಮಾತನಾಡಿದ ಡಾ. ಗೀತಾಂಜಲಿ ತೋಟಗಿ ಅವರು, ಗರ್ಭಾಶಯ, ಅಂಡಾಶಯ ಹಾಗೂ ಅದರ ಆಂತರಿಕ ಪರಿಸರದಲ್ಲಾಗುವ ರಾಸಾಯನಿಕ ಬದಲಾವಣೆಗಳು, ಅನುವಂಶೀಯತೆ, ಹಾರ್ಮೋನುಗಳಲ್ಲಾಗುವ ಬದಲಾವಣೆ, ಆಹಾರ ಕ್ರಮದಲ್ಲಾಗುವ ಏರಿಳಿತಗಳು, ಆರೋಗ್ಯದ ಅಲಕ್ಷ್ಯತೆ ಮುಂತಾದ ಕಾರಣಗಳಿಂದ ಈ ತೆರನಾದ ಗಂಟುಗಳಿಂದ ಮಹಿಳೆಯರು ಸಮಸ್ಯೆಗೆ ಗುರಿಯಾಗುತ್ತಾರೆ. ಕಾಲಕಾಲಕ್ಕೆ ವೈದ್ಯರ ತಪಾಸಣೆ ಸಮಸ್ಯೆಗಳು ಉಲ್ಭಣಗೊಳ್ಳುವದಕ್ಕಿಂತ ಮುಂಚೆಯೇ ತಪಾಸಣೆಗೊಳಪಟ್ಟು ತಕ್ಕ ಚಿಕಿತ್ಸೆಯನ್ನು ಹೊಂದಿದರೆ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.

ಶಸ್ತ್ರ ಚಿಕಿತ್ಸೆಯನ್ನು ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಆರ್. ಜಿ.ನೆಲವಿಗಿ ಹಾಗೂ ನುರಿತ ಅರವಳಿಕೆ ತಜ್ಞ ಡಾ. ಸುರೇಶ ಎಸ್ .ಎನ್. ಅವರ ತಂಡ ಕಾರ್ಯದಲ್ಲಿ ನೆರವೇರಿಸಲಾಗಿದೆ.

ಈ ಸಂದರ್ಭದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ ಅವರು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು ಹಾಗೂ ದಾದಿಯರ ತಂಡಕ್ಕೆ ಅಭಿನಂದಿಸಿದರು. ಇಂತಹ ಕ್ಲಿಷ್ಟ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ವೈದ್ಯರ ತಂಡಕ್ಕೆ ಅಭಿನಂದಿಸುತ್ತ ಆಸ್ಪತ್ರೆಯ ನಿರ್ದೇಶಕ ಡಾ. ಎಸ್. ಸಿ.ಧಾರವಾಡ ಮಾತನಾಡಿ, ಇಂತಹ ಸಮಸ್ಯೆ ಗಳು ಪ್ರತಿ 1000 ಮಹಿಳೆಯರಲ್ಲಿ 20 ರಿಂದ 30 ಮಹಿಳೆಯರಲ್ಲಿ ಇಂತಹ ಸಮಸ್ಯೆಗಳನ್ನು ಕಾಣಬಹುದಾಗಿದೆ. ಆದರೆ ಇಷ್ಟುದೊಡ್ಡ ಗಂಟು ಇರುವದು ಬಲು ಅಪರೂಪವಾಗಿದೆ. ಆದರೆ ಸಕಾಲಕ್ಕೆ ವೈದ್ಯರನ್ನು ಕಂಡು ತಪಾಸಣೆಗೊಳಪಟ್ಟಲ್ಲಿ ಇಂತಹ ಸಮಸ್ಯೆಗಳಿಂದ ದೂರವಿರಬಹುದಾಗಿದೆ ಎಂದು ತಿಳಿವಳಿಕೆ ನೀಡಿದರು.

ಇಂತಹ ಕಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರ ತಂಡವನ್ನು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್.ಬಿ.ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.


Jana Jeevala
the authorJana Jeevala

Leave a Reply