ಅಗಸಗಿ ಗ್ರಾಮದೇವಿ ಶ್ರೀ ಲಕ್ಷ್ಮೀ ಜಾತ್ರೆ ಏಪ್ರಿಲ್ 2027 ಕ್ಕೆ ನಿಗದಿ..!
ಬೆಳಗಾವಿ : 19 ವರ್ಷಗಳ ನಂತರ ಕೊನೆಗೂ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಗ್ರಾಮದೇವಿ ಶ್ರೀ ಲಕ್ಷ್ಮೀ ದೇವಿ ಜಾತ್ರೆಯನ್ನು 2027 ಏಪ್ರಿಲ್ ತಿಂಗಳಲ್ಲಿ ನಿಗದಿ ಮಾಡಿ ಅದ್ದೂರಿಯಾಗಿ ನಡೆಸಲು ಅಗಸಗಿ ಗ್ರಾಮದ ದೇವಸ್ಥಾನ ಪಂಚ ಕಮಿಟಿಯವರು ತೀರ್ಮಾನಿಸಿದ್ದಾರೆ.
ಒಟ್ಟು 9 ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಏಪ್ರಿಲ್ 13 ನೇ ತಾರೀಕಿಗೆ ಜಾತ್ರೆ ಆರಂಭವಾಗಿ 21 ಕ್ಕೆ ಮುಕ್ತಾಯಗೊಳ್ಳಲಿದೆ.
ಇದಕ್ಕಿಂತ ಮುಂಚೆ ಏಪ್ರಿಲ್ 7 ರಂದು ಅಂಕಿ ಹಾಕಿ 7 ದಿನಗಳ ಕಾಲ ಕಟಿಬದ್ಧ ವಾರ ಪಾಲಿಸಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲಾಗುವುದು ಎಂದು ದೇವಸ್ಥಾನ ಪಂಚ ಕಮಿಟಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಾತ್ರೆ ನಿಗದಿ ಸಭೆಯಲ್ಲಿ ಪಂಚ ಕಮಿಟಿ ಅಧ್ಯಕ್ಷ ಹಾಗೂ ಊರಿನ ಗೌಡರಾದ ಗೌಡಪ್ಪ ದುಂಡಪ್ಪಾ ಪಾಟೀಲ, ಸದಸ್ಯರಾದ ಕಾಲಗೌಡ ಪಾಟೀಲ, ಬಸನಗೌಡ ನಿಂ ಪಾಟೀಲ, ಸಿದ್ದಲಿಂಗ ಮುದ್ದಣ್ಣವರ, ಪುಟ್ಟಸ್ವಾಮಿ ಹಿರೇಮಠ, ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಮಾಜಿ ಅಧ್ಯಕ್ಷ ಅಪ್ಪಯ್ಯಗೌಡ ಪಾಟೀಲ, ಗುಂಡು ಕುರಿ, ಬೈರು ಕಂಗ್ರಾಲ್ಕರ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಯುವಕರು ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.


