ಬೆಳಗಾವಿ: ಶಹಾಪುರ ಮಹಾತ್ಮಪುಲೆ ರಸ್ತೆಯ ಶ್ರೀ ದಾನಮ್ಮ ದೇವಿ ಮಂದಿರದಲ್ಲಿ ಶ್ರೀ ದಾನಮ್ಮ ದೇವಿ ಪ್ರತಿಷ್ಠಾಪನೆಯ 41ನೇ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಲಾಗಿದೆ.
ಜ. 25 ರಂದು ಬೆಳಗ್ಗೆ 10.15 ಕ್ಕೆ ರಕ್ತದಾನ ಶಿಬಿರ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಮತ್ತು ಕೆಎಲ್ಇ ಆಸ್ಪತ್ರೆ ಇವರ ಸಹಯೋಗದಲ್ಲಿ ಆಯೋಜಿತಗೊಂಡಿದೆ. ವಡಗಾವಿ ಸಾಯಿ ಹಾಸ್ಪಿಟಲ್ ನ ಎಸ್.ಎಂ. ದೊಡ್ಡಮನಿ ಉದ್ಘಾಟಿಸುವರು.
ಜ. 31 ರಂದು ಸಂಜೆ 5:30ಕ್ಕೆ 41ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಮಗ್ರಿಗಳ ವಿತರಣಾ ಕಾರ್ಯಕ್ರಮದ ನೇತೃತ್ವವನ್ನು ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ವಹಿಸುವರು. ಉದ್ಯಮಿ ಜಯಂತ ಹುಂಬರವಾಡಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ, ಕೆಎಲ್ ಇ ಪ್ರಸಾರಂಗ ವಿಭಾಗದ ನಿರ್ದೇಶಕ ಬಿ.ಎಸ್. ಗವಿಮಠ, ಜಿಎ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಂ.ಎಸ್. ಇಂಚಲ ಅವರನ್ನು ಸನ್ಮಾನಿಸಲಾಗುವುದು. ಜ. 31ರಂದು ಬೆಳಗ್ಗೆ 9 ಕ್ಕೆ ಜಂಗಮ ದಂಪತಿಗಳ ಪೂಜೆ, ಮಧ್ಯಾಹ್ನ 12 ರಿಂದ ಮಹಾಪ್ರಸಾದ, ಸಂಜೆ 5:30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಉದ್ಯಮಿ ಅಮರ ಹತ್ತರಕಿ ಉದ್ಘಾಟಿಸುವರು ಎಂದು ಶ್ರೀ ದಾನಮ್ಮ ದೇವಿ ವಾರ್ಷಿಕೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.


