*ಇನ್ಮುಂದಿನ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಚರ್ಚೆಯೇ ಮೊದಲು
*20ಸಾವಿರ ಜನರಿಂದ ಸದನ ವೀಕ್ಷಣೆ
ಬೆಳಗಾವಿ:15ನೇ ವಿಧಾನಸಭೆ 14ನೇ ಅಧಿವೇಶನ ಬೆಳಗಾವಿಯಲ್ಲಿ ನಡೆದಿದೆ ಒಟ್ಟು 41.20ಗಂಟೆ ಸಾರ್ಥಕವಾಗಿ ನಡೆದಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 15ನೇ ವಿಧಾನಸಭೆಯಲ್ಲಿ ಒಟ್ಟು 29ದಿನ ಅಧಿವೇಶನ ನಡೆದಿದೆ.
ಬೆಂಗಳೂರು- ಬೆಳಗಾವಿ ಸೇರಿ 45ದಿನ ಒಟ್ಟು ಅಧಿವೇಶನ ರಾಜ್ಯದಲ್ಲಿ ನಡೆದಿದೆ.
ಈ ಭಾರಿ ಸದನದಲ್ಲಿ 13ಬಿಲ್ಸ್ ಮಂಡಿಸಲಾಯಿತು. 9ವಿಧೇಯಕ ಅಂಗೀಕರಿಸಲಾಯಿತು. ಬೆಳಗಾವಿಯಲ್ಲಿ ಈ ಭಾರಿ ಒಟ್ಟು 41.20ಗಂಟೆ ಸದನದ ಚರ್ಚೆ ನಡೆದಿದೆ. ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸಾರ್ಥಕ ಚರ್ಚೆ ನಡೆದಿದೆ.
2325 ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಲಾಯಿತು. ವಿಧಾನಸಭೆ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ, ಬಸವೇಶ್ವರ, ಡಾ. ಬಿ. ಆರ್. ಅಂಬೇಡ್ಕರ್, ವೀರ ಸಾವರ್ಕರ್, ನೇತಾಜಿ ಸುಭಾಷಚಂದ್ರ ಬೋಸ್ ಇತರರ ಚಿತ್ರ ಹಾಕಲಾಗಿದೆ. ಸುವರ್ಣಸೌಧ ಆವರಣದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್ ಸೇರಿ ಇತರ ಮಹಾಪುರುಷರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಪೂಜೆ ಮಾಡಲಾಗಿದೆ.
ಶೇ. 74 ರಷ್ಟು ಶಾಸಕರ ಹಾಜರಾತಿ ಇತ್ತು. ಆದರೆ ನಿರೀಕ್ಷೆ ಮೀರಿದ ಗೈರು ಹಾಜರಾತಿ ಸಿಗಲಿಲ್ಲ. ಜನಪ್ರತಿನಿಧಿಗಳು ಆದ್ಯತೆ ಮೃಎಗೆ ಸದನಗಳಿಗೆ ಬರಬೇಕು ಎಂದು ಸ್ಪೀಕರ್ ಸಲಹೆ ನೀಡಿದರು. 9ಜನ ಶಾಸಕರು ನನಗೆ ಮಾಹಿತಿಯನ್ನೂ ಕೊಡದೇ ಗೈರು ಹಾಜರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಏಳ್ಗೇಗಾಗಿ ಸಾಕಷ್ಟು ಚರ್ಚೆ ಆಗಬೇಕಿತ್ತು. ಇಲ್ಲಿನ ಶಾಸಕರಿಗೆ ಸಮಯ ಕೊಡಲು ಪ್ರಯತ್ನಿಸಿದ್ದೇನೆ. ಅಜೆಂಡಾ ಪ್ರಕಾರ ಉತ್ತರ ಕರ್ನಾಟಕ ಚರ್ಚೆ ಮಾಡಲು ಆಗಿಲ್ಲ. ಮುಂದಿನ ಅಧಿವೇಶನದಲ್ಲಿ ಮೊಟ್ಟ ಮೊದಲು ಉತ್ತರ ಕರ್ನಾಟಕ ಚರ್ಚೆ ಮಾಡಲು ನಿರ್ಧರಿಸಲಾಗಿದೆ.
80 ಜನ ಸಮೂಹ ಸಂಘಟನೆಗಳು ಪ್ರತಿಭಟನೆ, 20 ಸಂಘಟನೆಗಳ ಪ್ರತಿಭಟನೆ ಮನವಿ ಒಟ್ಟು 100ಪ್ರತಿಭಟನೆ ಮಾಡಿದ್ದು ಗಮನಾರ್ಹ. ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಪೂರಕವಾಗಿ ಕೆಲಸ ಮಾಡಿವೆ ಎಂದರು. ಈ ಭಾರಿ 20 ಸಾವಿರ ಜನ ಈ ಭಾರಿ ಅಧಿವೇಶನ ವೀಕ್ಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಮಿಷ್ನರ್ ಡಾ. ಬೋರಲಿಂಗಯ್ಯ, ಎಸ್ಪಿ ಡಾ. ಸಂಜೀವ ಪಾಟೀಲ ಉಪಸ್ಥಿತರಿದ್ದರು.