ಬೆಳಗಾವಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾದ ಬೆಳಗಾವಿ ವೈದ್ಯಕೀಯ ಸಂಸ್ಥೆಯ (ಬಿಮ್ಸ್) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಯೊಬ್ಬರು ಹಾಸ್ಟೆಲ್ ನ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಮೂಲದ 27-ವರುಷದ ಪ್ರಿಯಾ ಬಿಮ್ಸ್ ನಲ್ಲಿ ಸ್ನಾತಕೋತ್ತರ ಅಂತಿಮ ವರುಷದ ವಿದ್ಯಾರ್ಥಿಯಾಗಿದ್ದರು. ಸೋಮವಾರ ಸಂಜೆ 4.30ಕ್ಕೆ ತಮ್ಮ ಕರ್ತವ್ಯ ಮುಗಿಸಿ ಆಸ್ಪತ್ರೆ ಆವರಣದಲ್ಲಿರುವ ತಮ್ಮ ಹಾಸ್ಟೆಲ್ ಗೆ ತೆರಳಿದ್ದರು. ಸಂಜೆ ಹಾಸ್ಟೆಲ್ ನ ಸಹಪಾಠಿಗಳು ಅವರ ಕೋಣೆಗೆ ಹೋಗಿದ್ದಾಗ ಅವರು ಹಾಸಿಗೆಯ ಮೇಲೆ ನಿಶ್ಚಲರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಲಾಯಿತು, ಅಲ್ಲಿ ಅವರನ್ನು ಮೃತರೆಂದು ತಿಳಿಸಲಾಯಿತು.
ತುರ್ತು ಚಿಕಿತ್ಸಾ ವಿಭಾಗಕ್ಕೆ ಭೆಟ್ಟಿ ನೀಡಿದ ಬಿಮ್ಸ್ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ, ಪ್ರಿಯಾ ಮಾನಸಿಕ ಖಿನ್ನತೆಗೆ ವೈದ್ಯಕೀಯ ಉಪಚಾರ ಪಡೆಯುತ್ತಿದ್ದರು. ಪ್ರತಿದಿನ ತೆಗೆದುಕೊಳ್ಳುವ ಮೆಡಿಸಿನ್ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಿರುವ ಸಾಧ್ಯತೆಯಿದೆ. ಅದೇ ಅವರ ಸಾವಿಗೆ ಕಾರಣವಾಗಿರಲೂ ಬಹುದು.
ವಿದ್ಯಾರ್ಥಿನಿ ಪ್ರಿಯಾ ಕಾರ್ತಿಕ್ . ಈ ಹಿಂದೆ ಬೆಂಗಳೂರಿನಲ್ಲಿ ಅವರು ಆತ್ಮಹತ್ಯೆಗೆ ಒಮ್ಮೆ ಯತ್ನಿಸಿದ್ದರು. ಬ್ಲೇಡ್ ಮುಂತಾದ ಹರಿತ ವಸ್ತುಗಳಿಂದ ತಮ್ಮ ದೇಹವನ್ನು ಕತ್ತರಿಸಿಕೊಂಡಿದ್ದರು. ಬೆಂಗಳೂರು ವೈದ್ಯಕೀಯ ಕಾಲೇಜ್ (ಬಿಎಂಸಿ) ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು ಎಂದೂ ಡಾ. ಶೆಟ್ಟಿ ತಿಳಿಸಿದರು.
ಬೆಳಗಾವಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ
