ಬೆಳಗಾವಿ :
ಗೋಕಾಕದ ಉದ್ಯಮಿ ಹತ್ಯೆ ಮತ್ತು ಆತನ ಶವ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆದ ಸ್ಥಳದಿಂದ 10ಕಿಮೀ ಅಂತರದಲ್ಲಿ ಪಂಚನಾಯಕನಟ್ಟಿ ಬಳಿ ಬಾವಿಯೊಂದರಲ್ಲಿ ರಾಜು ಝಂವರ(52)ಶವ ಪತ್ತೆಯಾಗಿದೆ.
ಕೊಲೆ ಆರೋಪದಲ್ಲಿ ಈಗಾಗಲೇ ಇಬ್ಬರು ವೈದ್ಯರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿತ ಇರ್ಷಾದ್ ಅಹ್ಮದ್ ತ್ರಾಸಗರ್(25) ಎಂಬುವವನನ್ನು ಸಹ ಗೋಕಾಕ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಕಳೆದ ಒಂದು ವಾರದಿಂದ ಬೃಹತ್ ಕಾಲುವೆ ಸುತ್ತ, ಹೊಲ ಗದ್ದೆಗಳಲ್ಲಿ ಪೊಲೀಸರು ತಿರುಗಾಡಿ ಮೃತ ಉದ್ಯಮಿಯ ದೇಹಕ್ಕಾಗಿ ಹುಡುಕಾಟ ನಡೆಸಿದ್ದರು.
ತಪಾಸಣೆಗೈದ ಪೊಲೀಸರಿಗೆ ಎಸ್ಪಿ ಡಾ. ಸಂಜೀವ ಪಾಟೀಲ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.