ಗೋವಾದಿಂದ ಅಕ್ರಮ ಮದ್ಯ ಸಾಗಾಟ ..!
90 ಬಾಕ್ಸ್ ನಲ್ಲಿ ಸಿಕ್ಕಿತು 25 ಲಕ್ಷ ರೂ ಮೌಲ್ಯದ ಮದ್ಯ.
ಬೆಳಗಾವಿ : ಇಂದು ಬೆಳಗ್ಗೆ (24-11-2023) ರಂದು 4-30 ಗಂಟೆಯ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯಲ್ಲಿ ಅಬಕಾರಿ ನಿರೀಕ್ಷಕರು, ಖಾನಾಪೂರ ವಲಯ ಹಾಗೂ ಸಿಬ್ಬಂದಿ, ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಸೇರಿಕೊಂಡು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯಲ್ಲಿ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಕಂದು ಬಣ್ಣದ ಐಶರ್ ಕಂಪನಿಯ ಆರು ಚಕ್ರ ವಾಹನ ಸಂಖ್ಯೆ ಎಂಎಚ್-05 ಎಎಂ-0491 ಯನ್ನು ವಾಹನವನ್ನು ತಪಾಸಣೆ ಮಾಡಿದಾಗ ವಾಹನದಲ್ಲಿ 90 ರಟ್ಟಿನ ಪೆಟ್ಟಿಗೆಗಳಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಅಂತಾ ನಮೂದಿರುವ 750 ಎಂಎಲ್ ಅಳತೆಯ ಬ್ಲೆಂಡರ್ಸ್ ಸೈಡ್ ವಿಸ್ಕಿ ಬಾಟಲಿಗಳು, 04 ಪ್ಲಾಸ್ಟಿಕ್ ಕ್ಯಾನಿನಲ್ಲಿ 80.ಲೀ ದಷ್ಟು ಬ್ಲೆಂಡ ವಿಸ್ಕಿ, ಒಂದು ಚೀಲದಲ್ಲಿ ರಾಯಲ್ ಸ್ಪ್ಯಾಗ್ ವಿಸ್ಕಿಯ ಕ್ಯಾಪ್ ಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿವೆ.
ಅಕ್ರಮ ಮದ್ಯ ಸಾಗಾಣಿಕೆ ಆರೋಪಿಯಾದ ಎ-1 ಸುಭೋದ ಮಹತೊ ತಂದೆ:ರಾಮನಾಥ ಮಹತೊ ವಯ: 49 ವರ್ಷ ಜಾತಿ: ಬಿಹಾರಿ ಉದ್ಯೋಗ: ಡ್ರೈವರ್, ಸಾ: ವಾರ್ಡ.ನಂ:14, ಬಂಗಾ ಬಝಾರ, ಅನಶಾ ಅರ್ಜಿರಕಬೆ, ಬನಗಾಂವ, ಸೀತಾಮಾರ್ಥಿ, ಬಜಪಾಟಟ್ಟಿ, ಬಿಹಾರ ರಾಜ್ಯ-843314 ಇತನನ್ನು ಸ್ಥಳದಲ್ಲಿಯೇ ಬಂದಿಸಿದ್ದಾರೆ.
ಎ-2 ಒಂದು ಕಂದು ಬಣ್ಣದ ಐಶರ್ ಕಂಪನಿಯ ಆರು ಚಕ್ರ ವಾಹನ ಸಂಖ್ಯೆ ಎಂಎಚ್-05 ಎಎಂ-0491 ನೇದ್ದರ ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡು ಕ್ರಮಕ್ಕಾಗಿ ವಾಹನ ಹಾಗೂ ಮುದ್ದೆಮಾಲನ್ನು ಪಂಚನಾಮೆ ಪ್ರಕಾರ ಜಪ್ತು ಮಾಡಿಕೊಂಡು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.
ಸದರಿ ದಾಳಿಯನ್ನು ಮಾನ್ಯ ಡಾ:ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ.
ಫಿರೋಜಖಾನ ಕಿಲ್ಲೇದಾರ ಮಾನ್ಯ ಅಬಕಾರಿ ಜಂಟಿ ಆಯುಕ್ತರು, (ಜಾಷಿತ) ಬೆಳಗಾವಿ ವಿಭಾಗ, ಬೆಳಗಾವಿ, ಕು:ವಣಜಾಕ್ಷಿ ಎಂ. ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿ, ವಿಜಯಕುಮಾರ ಜೆ ಹಿರೇಮಠ, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಬೆಳಗಾವಿ (ದಕ್ಷಿಣ) ಜಿಲ್ಲೆ, ರವರ ಹಾಗೂ ರವಿ ಎಂ ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಮಲ್ಲೇಶ ಉಪ್ಪಾರ ಅಬಕಾರಿ ನಿರೀಕ್ಷಕರು.
ಖಾನಾಪೂರ ಅಬಕಾರಿ ವಲಯದವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಸದರಿ ದಾಳಿಯಲ್ಲಿ ಮಂಜುನಾಥ ಗಲಗಲಿ, ಅಬಕಾರಿ ನಿರೀಕ್ಷಕರು, ಉಪ ವಿಭಾಗ, ಬೆಳಗಾವಿ, ಬಾಳಗೌಡ ಪಾಟೀಲ ಅಬಕಾರಿ ನಿರೀಕ್ಷಕರು, ಕಣಕುಂಬಿ ತನಿಖಾ ಠಾಣೆ, ಕರೆಪ್ಪ ಹೊಳೆನ್ನವರ, ಚಂದ್ರಶೇಖರ ಕ್ಷೀರಸಾಗರ, ಅಮೃತ ಪೂಜೇರಿ, ಶರಣಪ್ಪ ತಳವಾರ, ಹಾಗೂ ಸಿಬ್ಬಂದಿ ದಾಳಿಯಲ್ಲ ಪಾಲ್ಗೊಂಡಿದ್ದರು.
ದಾಳಿಯಲ್ಲಿ ವಾಹನದ ಮೌಲ್ಯ ರೂ: 15,00,000/- , ಅಕ್ರಮ ಸರಾಯಿ ಮೌಲ್ಯ
ರೂ. 25,00,200/- ಹೀಗೆ ಒಟ್ಟು 40,00,200/- ಮೌಲ್ಯದ ಮಾಲದ ಮಾಲು ವಶಪಡಿಸಿಕೊಂಡಿದ್ದಾರೆ.