ಬೆಂಗಳೂರು:
ವಾರದ ಹಿಂದಷ್ಟೇ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಇಂದು ಮಹಿಳೆಯರಿಗೆ ಮತ್ತೊಂದು ಉಡುಗೊರೆ ನೀಡುವ ಘೋಷಣೆ ಮಾಡಿದೆ.
ಮಹಿಳೆಯರಿಗೆ 2000 ಸಹಾಯಧನ ಘೋಷಣೆ ಇದೀಗ ಸಂಚಲನಕ್ಕೆ ಕಾರಣವಾಗಿದೆ. ಮುಂದಿನ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಿದ್ದು , ಇದರಡಿ ಎಲ್ಲಾ ವಿವಾಹಿತ ಮಹಿಳೆಯರಿಗೆ 2000 ಸಹಾಯ ಧನ ನೀಡಲಾಗುತ್ತದೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.
ಜಾತಿ , ಧರ್ಮ ನೋಡದೆ ಎಲ್ಲಾ ಕುಟುಂಬಗಳಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸಲಾಗುವುದು . ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆ ಮತ ಚಲಾಯಿಸಿ , ಪಕ್ಷವನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ಮನವಿ ಮಾಡಿಕೊಂಡಿದ್ದಾರೆ .
ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷವು ಇಂದು ಈ ಮತ್ತೊಂದು ಯೋಜನೆಯನ್ನು ಘೋಷಣೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನ್ತಿ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಕುವ ಬಗ್ಗೆ ಘೋಷಿಸಿದೆ.
ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದರು.
ಬೆಲೆಯೇರಿಕೆಯಿಂದ ಬಸವಳಿದು ಮನೆಯ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿರುವ ರಾಜ್ಯದ ಎಲ್ಲಾ ಗೃಹಿಣಿಯರೇ, ನಿಮ್ಮ ಮನೆ ನಿರ್ವಹಣೆ ಇನ್ಮುಂದೆ ಕಾಂಗ್ರೆಸ್ ಹೊಣೆ! ರಾಜ್ಯದ ಮಹಿಳೆಯರೇ, ದಿನಸಿ ವಸ್ತುಗಳು ದುಬಾರಿಯಾಗಿವೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಪ್ರತಿ ತಿಂಗಳ ದಿನಸಿ ಖರ್ಚು ಇನ್ಮುಂದೆ ಕಾಂಗ್ರೆಸ್ ಹೊಣೆ ಎಂದು ಕಾಂಗ್ರೆಸ್ ಭರವಸೆ ನೀಡಿದೆ.