ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ₹ 200 ನೀಡಲೇಬೇಕು.
ಇದು ಬೆಳಗಾವಿ ಶೇರಿಗಲ್ಲಿಯಲ್ಲಿ ಕಂಡು ಬಂದ ಸನ್ನಿವೇಶ. ಸ್ಥಳೀಯ ಯುವಕ ಮಂಡಳದ ಸದಸ್ಯರು ಮಂಗಳವಾರ ವಿವಿಧ ಅಂಗಡಿ-ಮುಂಗಟ್ಟುಗಳಿಗೆ ಆಗಮಿಸಿ ಇಷ್ಟು ಹಣ ನೀಡಲೇ ಬೇಕು. ಇಲ್ಲವಾದರೆ ಹಣ ಬೇಡ ಎಂದು ತಾಕೀತು ಮಾಡುತ್ತಿರುವ ದೃಶ್ಯ ಕಂಡು ಬಂದಿತು. ಅದಕ್ಕಿಂತ ಕಡಿಮೆ ಹಣ ನೀಡಲು ಮುಂದಾದರೆ ನಿಮ್ಮ ಹಣ ಬೇಡವೇ ಬೇಡ ಎಂದು ಹೇಳುತ್ತಿರುವ ದೃಶ್ಯ ಗಮನಸೆಳೆಯಿತು.
ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರವೇ ಅತ್ಯಂತ ಮುತುವರ್ಜಿ ವಹಿಸಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾ ಆಡಳಿತದ ಮೂಲಕ ಅದ್ದೂರಿಯಿಂದ ಆಚರಿಸುತ್ತಿದೆ. ಕನ್ನಡ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ರಾಜ್ಯೋತ್ಸವದ ಸಂದರ್ಭದಲ್ಲಿ ತಾವೇ ಸ್ವತಃ ಹಣ ಕೂಡಿಸಿ ಬೆಳಗಾವಿಯಲ್ಲಿ ಐತಿಹಾಸಿಕ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ, ಇದೀಗ ಅಂಗಡಿ-ಮುಂಗಟ್ಟುಗಳು ಹಾಗೂ ಮನೆ ಮನೆಗಳಿಂದ ಹಣ ವಸೂಲಿ ಮಾಡುವುದಾದರೂ ಏಕೆ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.