ಬೆಂಗಳೂರು: ಸಿಬಿಎಸ್ಇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದಲ್ಲೂ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ಸರಳ ಗಣಿತ ಮತ್ತು ಸಾಮಾನ್ಯ ಗಣಿತ ಎಂಬ ಎರಡು ರೀತಿಯ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ, ಯಾವ ಪತ್ರಿಕೆಗೆ ಉತ್ತರ ಬರೆಯಬೇಕೆಂಬ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡುವಂಥ ನೀತಿ ಜಾರಿಗೆ ತರಬೇಕೆಂದು ವಿವಿಧ ಖಾಸಗಿ ಶಾಲಾ ಸಂಘಟನೆಗಳು ಸರ್ಕಾರನ್ನು ಒತ್ತಾಯಿಸಿವೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್), ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಪದಾಧಿಕಾರಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರಿಗೆ ಮನವಿ ಸಲ್ಲಿಸಿ ದ್ದಾರೆ.
ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಒಂದೇ ಪಠ್ಯ, ಒಂದೇ ರೀತಿಯ ಬೋಧನೆ ಮಾಡಿದರೂ ಮಕ್ಕಳ ಮೆದುಳಿನ ನರಮಂಡಲದಲ್ಲಿ ಗಣಿತ ಕಲಿಕೆ ಸಾಮರ್ಥಕ್ಕೆ ಪೂರಕವಾಗಿ ಅವರ ಕಲಿಕೆ ಇರುತ್ತದೆ. ಕಡಿಮೆ ಕಲಿಕೆ ಸಾಮರ್ಥವಿರುವ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ ಎನಿಸುತ್ತದೆ. ಅಂಥ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಳ ಗಣಿತ ಪ್ರಶ್ನೆ ಪತ್ರಿಕೆ, ಸಾಮಾನ್ಯ ಕಲಿಕಾ ಸಾಮರ್ಥ ಇರುವ ಮಕ್ಕಳಿಗೆ ಈಗಿರುವ ಸಾಮಾನ್ಯ ಗಣಿತ ಪ್ರಶ್ನೆ ಪತ್ರಿಕೆ ನೀಡಬೇಕು. ಒಟ್ಟಿನಲ್ಲಿ ಎರಡು ರೀತಿಯ ಪ್ರಶ್ನೆ ಪತ್ರಿಕೆಯಲ್ಲಿ ತಾವು ಯಾವುದಕ್ಕೆ ಉತ್ತರ ಬರೆಯಬೇಕೆಂಬ ಆಯ್ಕೆಯನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಿಕೊಳ್ಳುವ ಅವಕಾಶ ಮಕ್ಕಳಿಗೇ ನೀಡಬೇಕು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮನವಿ ಪತ್ರದಲ್ಲಿ ಕೋರಿದ್ದಾರೆ. ಪತ್ರದಲಿ ಕೋ ಎರಡು


