ಬೆಂಗಳೂರು: ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿ, ಕಲಾಪಕ್ಕೆ ಅಡ್ಡಿಪಡಿಸಿದ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಈ ಶಾಸಕರು ಅರು ತಿಂಗಳೊಳಗೆ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ.
ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ಆರೋಪನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಕಲಾಪ ನಡೆಸಲು ಅವಕಾಶ ಕೊಡಿ ಎಂದು ಖಾದರ್ ಅವರು ಮನವಿ ಮಾಡಿಕೊಂಡರೂ ಪಟ್ಟು ಬಿಡಲಿಲ್ಲ.
ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪ ಮುಂದೂಡಲಾಗಿತ್ತು. ಸಂಜೆ 4.10ಕ್ಕೆ ಕಲಾಪ ಆರಂಭವಾಯಿತು. ಸಭಾಧ್ಯಕ್ಷರ ಪೀಠದ ಗೌರವಕ್ಕೆ ಈ 18 ಶಾಸಕರು ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.
ಹೆಸರಿಸಿದ ಎಲ್ಲ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಪ್ರಸ್ತಾವ ಮಂಡಿಸಿದರು. ಅದನ್ನು ಸ್ಪೀಕರ್ ಧ್ವನಿಮತಕ್ಕೆ ಹಾಕಿದರು. ಗದ್ದಲದ ಮಧ್ಯೆಯೇ ಧ್ವನಿಮತದ ಮೂಲಕ ನಿರ್ಣಯ ಅಂಗೀರಿಸಲಾಯಿತು.
ಆರು ತಿಂಗಳು ಅಮಾನತುಗೊಂಡ ಬಿಜೆಪಿಯ 18 ಶಾಸಕರು:
1- ದೊಡ್ಡಣ್ಣ ಗೌಡ ಪಾಟೀಲ್
2- ಸಿ ಕೆ ರಾಮಮೂರ್ತಿ
3- ಅಶ್ವತ್ಥ ನಾರಾಯಣ
4- ಎಸ್ ಆರ್ ವಿಶ್ವನಾಥ್
5 – ಬೈರತಿ ಬಸವರಾಜ
6- ಎಂ ಆರ್ ಪಾಟೀಲ್
7- ಚನ್ನಬಸಪ್ಪ
8- ಬಿ ಸುರೇಶ್ ಗೌಡ
9- ಉಮನಾಥ್ ಕೋಟ್ಯಾನ್
10- ಶರಣು ಸಲಗಾರ್
11- ಶೈಲೇಂದ್ರ ಬೆಲ್ದಾಳೆ
12- ಯಶಪಾಲ್ ಸುವರ್ಣ
13- ಹರೀಶ್ ಬಿಪಿ
14- ಡಾ. ಭರತ್ ಶೆಟ್ಟಿ
15- ಮುನಿರತ್ನ
16- ಬಸವರಾಜ ಮತ್ತಿಮೋಡ್
17 -ಧೀರಜ್ ಮುನಿರಾಜು
18- ಡಾ ಚಂದ್ರು ಲಮಾಣಿ