ಪಟನಾ :
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ದೊಡ್ಡ ಮಟ್ಟದ ಒಗ್ಗಟ್ಟು ಪ್ರದರ್ಶಿಸಿವೆ.
17 ಪ್ರತಿಪಕ್ಷ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು ಈ ಪೈಕಿ 16 ಪಕ್ಷಗಳು ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಲು ನಿರ್ಣಯಿಸಿವೆ. ಈ ಬಗ್ಗೆ ಇನ್ನಷ್ಟು ರಣನೀತಿ ರೂಪಿಸಲು ಜುಲೈನಲ್ಲಿ ಸಿಮ್ಲಾದಲ್ಲಿ ಎರಡನೇ ಸುತ್ತಿನ ಸಭೆ ನಡೆಸಲಿವೆ. ಕಾಂಗ್ರೆಸ್, ಜೆಡಿಯು, ಆರ್ ಜೆ ಡಿ, ಆಮ್ ಆದ್ಮಿ ಪಕ್ಷ, ಟಿಎಂಸಿ ಸೇರಿದಂತೆ 17 ಪ್ರತಿಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿವೆ. ಆದರೆ ವಿವಾದಿತ ದಿಲ್ಲಿ ಸುಗ್ರೀವಾಜ್ಞೆಗೆ ಸಂಬಂಧಿಸಿದ ಕಾಂಗ್ರೆಸ್ ನೊಂದಿಗೆ ಆಮ್ ಆದ್ಮಿ ಪಕ್ಷ ಜಟಾಪಟಿಗೆ ಇಳಿದಿದ್ದು ಸದ್ಯದ ಮಟ್ಟಿಗೆ ಒಮ್ಮತದ ಹೋರಾಟದಿಂದ ದೂರ ಉಳಿದಿದೆ. ಪ್ರತಿಪಕ್ಷಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.