ಬೆಳಗಾವಿ :ರಾಯಬಾಗ ವಿಧಾನಸಭಾ ಮತಕ್ಷೇತ್ರದ ಮತದಾರರಿಗೆ ವಿತರಣೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲಾ 350 ರೂಪಾಯಿ ಬೆಲೆಯುಳ್ಳ 5000 ಸೀರೆ ಪತ್ತೆಯಾಗಿದೆ. ಇವುಗಳ ಒಟ್ಟು ಬೆಲೆ 16 ಲಕ್ಷ. ಇದನ್ನು ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಮಿನಿ ಲಾರಿ ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಹರ ಪತ್ತಾರ್ ಮತ್ತು ಸಿಬ್ಬಂದಿ ವಾಹನ ತಡೆದು ವಿಚಾರಣೆ ನಡೆಸಿದ್ದಾರೆ. ಆಗ ಚಾಲಕ ಸಮರ್ಪಕ ಉತ್ತರ ನೀಡಿರಲಿಲ್ಲ.
ಇವುಗಳನ್ನು ಯಾವುದೇ ದಾಖಲೆಗಳು ಇಲ್ಲದೆ ಮಿನಿ ಲಾರಿಯಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ವಾಹನ ಚಾಲಕ ಕೊಲ್ಲಾಪುರ ಜಿಲ್ಲೆ ಕರವೀರ ತಾಲೂಕಿನ ಉಚಗಾಂವ ಹುಂಕಾರ ಕಾಲೋನಿಯ ಖದೀರ್ ದಾವರ್ ಶೇಖ್ (60) ಮತ್ತು ವಸಂತ ಕಾಂಬಳೆ (50) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.