ದೆಹಲಿ :
ಸುಮಾರು 1,526 ಕೋಟಿ ರೂ.ವೆಚ್ಚದಲ್ಲಿ ದೇಶಾದ್ಯಂತ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳ ಬಳಿ ನರ್ಸಿಂಗ್ ಕಾಲೇಜುಗಳನ್ನು ಉದ್ದೇಶ ಹೊಂದಲಾಗಿದೆ. ಎರಡು ವರ್ಷದೊಳಗೆ ಈ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.


