ಭೋಪಾಲ್ :
ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 14 ಜನ ಮೃತಪಟ್ಟ ಘಟನೆ ಮಧ್ಯಪ್ರದೇಶದ ರೆವಾ ಜಿಲ್ಲೆಯ ಸುಹಾಸಿ ಪಹರಿ ಬಳಿ ನಡೆದಿದೆ. ಕನಿಷ್ಠ ನಲವತ್ತು ಜನ ಗಾಯಗೊಂಡಿದ್ದು ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹೈದರಾಬಾದಿನಿಂದ ಗೋರಕಪುರಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿದ್ದವರು ಉತ್ತರ ಪ್ರದೇಶ ನಿವಾಸಿಗಳು ಎಂದು ಎಸ್ಪಿ ನವಜಿತ್ ಬಾಸಿನ್ ತಿಳಿಸಿದ್ದಾರೆ.


