This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಧಾರ್ಮಿಕ ಮೆರವಣಿಗೆಗೆ ನುಗ್ಗಿದ ಟ್ರಕ್‌: 12 ಸಾವು Truck rammed into religious procession: 12 killed


ಹಾಜಿಪುರ:
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ವೇಗವಾಗಿ ಬಂದ ಟ್ರಕ್ ನುಗ್ಗಿದ ಪರಿಣಾಮ ಹಲವಾರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ. ವೈಶಾಲಿ ಜಿಲ್ಲೆಯ ಮೆಹನಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಪಾಟ್ನಾದಿಂದ ಸುಮಾರು 55-60 ಕಿಮೀ ದೂರದ ಸುಲ್ತಾನ್‌ಪುರ ಗ್ರಾಮದ ಬಳಿ ಸಂತ್ರಸ್ತರು ರಾತ್ರಿ 9 ಗಂಟೆ ಸುಮಾರಿಗೆ ಔತಣಕೂಟವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಟ್ರಕ್ ಚಾಲಕ ಮತ್ತು ಸಹಾಯಕನನ್ನು ಬಂಧಿಸಿದ್ದಾರೆ. ಚಾಲಕ ಪಾನಮತ್ತನಾಗಿದ್ದಾನೋ ಇಲ್ಲವೋ ಎಂಬುದು ವೈದ್ಯಕೀಯ ಪರೀಕ್ಷೆಯ ನಂತರವಷ್ಟೇ ಗೊತ್ತಾಗಲಿದೆ ಎಂದು ವೈಶಾಲಿ ಎಸ್ಪಿ ತಿಳಿಸಿದ್ದಾರೆ.
ವೈಶಾಲಿ ಪೊಲೀಸ್ ಅಧೀಕ್ಷಕ ಮನೀಶಕುಮಾರ್, “ಮದುವೆಗಳಿಗೆ ಸಂಬಂಧಿಸಿದ ಸಂಪ್ರದಾಯದ ಭಾಗವಾಗಿ ಮೆರವಣಿಗೆನಡೆಯುತ್ತಿತ್ತು. ಹತ್ತಿರದ ಸುಲ್ತಾನ್‌ಪುರ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಕೆಲವೇ ದಿನಗಳಲ್ಲಿ ಮದುವೆಯನ್ನು ನಿಗದಿಪಡಿಸಲಾಗಿತ್ತು. ವೇಗವಾಗಿ ಹೋಗುತ್ತಿದ್ದ ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡ ನಂತರ ಈ ಘಟನೆ ನಡೆದಿದೆ.

ರಾತ್ರಿ 9 ಗಂಟೆಯ ಸುಮಾರಿಗೆ ಮೆರವಣಿಗೆಯು ರಸ್ತೆಬದಿಯಲ್ಲಿರುವ ಮರದ ಮುಂದೆ ಸ್ಥಳೀಯ ದೇವತೆ ಭೂಮಿಯಾ ಬಾಬಾಗೆ ಪ್ರಾರ್ಥನೆ ಸಲ್ಲಿಸಲು ಜನ ಜಮಾಯಿಸಿದಾಗ ಅಪಘಾತ ಸಂಭವಿಸಿದೆ. ಒಂಬತ್ತು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇತರರನ್ನು ಹಾಜಿಪುರ (ಜಿಲ್ಲಾ ಕೇಂದ್ರ) ನಲ್ಲಿರುವ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತು ದಾರಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಸ್ಥಿತಿ ಗಂಭೀರವಾಗಿರುವವರನ್ನು ಪಾಟ್ನಾದ ಆಸ್ಪತ್ರೆಗಳಿಗೆ ತಪಾಸಿಸಲಾಗುತ್ತಿದೆ ಎಂದು ಅವರು ತಿಳಿಸಿದರು.


Jana Jeevala
the authorJana Jeevala

Leave a Reply