ಬೆಳಗಾವಿ : ಬೆಳಗಾವಿ ವಾಣಿಜ್ಯೋದ್ಯಮ ಸಂಘದ (ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್) ಆಡಳಿತ ಮಂಡಳಿಗೆ 10 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟ್ರೇಡ್ ಸೆಕ್ಟರ್ ನ ಆಜೀವ ಸದಸ್ಯರ 5 ಸ್ಥಾನ ಮತ್ತು ಸಾಮಾನ್ಯ ಸದಸ್ಯರ ಒಂದು ಸ್ಥಾನಕ್ಕೆ, ಇಂಡಸ್ಟ್ರೀಯಲ್ ಸೆಕ್ಟರ್ ನ ಆಜೀವ ಸದಸ್ಯರ 3 ಸ್ಥಾನ ಮತ್ತು ಸಾಮಾನ್ಯ ಸದಸ್ಯರ 1 ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು.
ಒಟ್ಟೂ 12 ಜನರು ನಾಮಪತ್ರ ಸಲ್ಲಿಸಿದ್ದರು. ಸೋಮವಾರ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅಂತಿಮ ದಿನವಾಗಿತ್ತು. ಟ್ರೇಡ್ ಸೆಕ್ಟರ್ ನ ಓರ್ವ ಹಾಗೂ ಇಂಡಸ್ಟ್ರಿಯಲ್ ಸೆಕ್ಟರ್ ನ ಓರ್ವ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಗಳು ಪ್ರಕಟಿಸಿದರು.
ಎಂ.ಕೆ.ಹೆಗಡೆ, ಅಪ್ಪಾಸಾಹೇಬ ಗುರವ್, ರೋಹಿತ್ ಕಪಾಡಿಯಾ, ಸಚಿನ್ ಹಂಗಿರಗೇಕರ್, ವಿಜಯ ದರಗಶೆಟ್ಟಿ ಟ್ರೇಡಿಂಗ್ ಸೆಕ್ಟರ್ ನ ಆಜೀವ ಸದಸ್ಯ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾದರು.
ಇಂಡಸ್ಟ್ರಿಯಲ್ ಸೆಕ್ಟರ್ ನ ಆಜೀವ ಸದಸ್ಯ ಕ್ಷೇತ್ರಕ್ಕೆ ದಯಾನಂದ ನೇತಲಕರ್, ಸಚಿನ್ ಸಬ್ನಿಸ್, ವಿನಿತ್ ಹರಕುಣಿ ಆಯ್ಕೆಯಾದರು. ಟ್ರೇಡ್ ಸೆಕ್ಟರ್ ನ ಸಾಮಾನ್ಯ ಕ್ಷೇತ್ರಕ್ಕೆ ಸುಧೀರ್ ಚೌಗಲೆ ಮತ್ತು ಇಂಡಸ್ಟ್ರಿಯಲ್ ಸೆಕ್ಟರ್ ನ ಸಾಮಾನ್ಯ ಕ್ಷೇತ್ರಕ್ಕೆ ಬಸವರಾಜ ರಾಮಪುರೆ ಆಯ್ಕೆಯಾದರು.
ಟ್ರೇಡಿಂಗ್ ಸೆಕ್ಟರ್ ಗೆ ಪ್ರವೀಣ ರಂಗೋಲೆ ಮತ್ತು ಇಂಡಸ್ಟ್ರಿಯಲ್ ಸೆಕ್ಟರ್ ಗೆ ಪ್ರವೀಣ ಪರಮಶೆಟ್ಟಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.