10 ದಿನಗಳ ಹಿಂದೆ ನಡೆದ ಪ್ರಫುಲ್ಲ ಮೇಲಿನ ಪೈರಿಂಗ್ ಪ್ರಕರಣದಲ್ಲಿ ರೋಚಕತೆ..!
ಸುಪಾರಿ ಪಡೆದ ಐವರಲ್ಲಿ ಮೂವರ ಬಂಧನ.
ಕೊಲೆಗೆ ಸುಪಾರಿ ಕೊಟ್ಟವನ್ಯಾರು..?
ಗ್ರಾಮೀಣ ಪೊಲೀಸರಿಂದ ಗ್ಯಾರಂಟಿ ಕಾರ್ಯಾಚರಣೆ..!
ಬೆಳಗಾವಿ : ಹತ್ತು ದಿನಗಳ ಹಿಂದೆ (ದಿನಾಂಕ 10/01/2025) ರಂದು ಬೆಳಂಬೆಳಗ್ಗೆ 05:00 ಗಂಟೆ ಸುಮಾರಿಗೆ ಬೆಳಗಾವಿ ಗಣೇಶಪೂರದ ಹಿಂದೂ ನಗರದ ಹತ್ತಿರ ರಸ್ತೆಯ ಮೇಲೆ ಉದ್ಯಮಿ ಹಾಗೂ ರೌಡಿ ಪ್ರಫೂಲ ಬಾಳಕೃಷ್ಣ ಪಾಟೀಲ, ವಯಸ್ಸು: 30 ವರ್ಷ, ಸಾ॥ 51/3/ಬಿ. ಶಾಹುನಗರ, ಬೆಳಗಾವಿ ಇವನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ. ಐದು ಜನ ಕೊಲೆಗೆ ಸುಪಾರಿ ತೆಗೆದುಕೊಂಡು ಗುಂಡು ಹಾರಿಸಿದ್ದಾರೆ. ಐವರಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದು ಪ್ರಫುಲ್ಲ ಮೇಲೆ ಪೈರಿಂಗ್ ನಡೆದ ನಂತರ ಗಾಯಾಳುವಿನ ತಮ್ಮ ರೋಹಿತ ಬಾಳಕೃಷ್ಣ ಪಾಟೀಲ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು.
ಗಾಯಾಳು ಪ್ರಫುಲ್ಲ ಬಾಳಕೃಷ್ಣ ಪಾಟೀಲ ಮತ್ತು ಸಂಶಯಿತ ಆರೋಪಿಗಳಾದ
1)ರಾಜು ಕಡೊಲ್ಕರ ಸಾ॥ ಕಾಮತ ಗಲ್ಲಿ ಬೆಳಗಾವಿ
2)ರಾಜು ಪಾಟೀಲ ಸಾ॥ ನೆಹರು ನಗರ ಬೆಳಗಾವಿ ಇವರ ಹಾಗೂ ಪ್ರಫೂಲ್ ನಡುವೆ ಒಂದು ವರ್ಷದ ಹಿಂದೆ ತಂಟೆ ಆಗಿ ಅವರವರಲ್ಲಿ ವೈಷಮ್ಯ ಬೆಳೆದಿತ್ತು. ಇದೆ ವೈಷಮ್ಯದಿಂದ ನನ್ನ ಅಣ್ಣ ಪ್ರಫುಲ್ಲ ಪಾಟೀಲ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆಂದು ಇತ್ಯಾದಿಯಾಗಿ ಕೊಟ್ಟಿದ್ದ ಫಿರ್ಯಾದಿಯನ್ನು ಸ್ವೀಕರಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂಖ್ಯೆ 10/2025 ಕಲಂ 189(2), 191(3), 109 ಸ.ಕ. 190 ಬಿ.ಎನ್.ಎಸ್. ಮತ್ತು 25(1-ಎ),27(1) ಭಾರತೀಯ ಆಯುಧಗಳ ಕಾಯ್ದೆ- 1959 ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಹತ್ಯೆಗೆ ಸಂಚು ರೂಪಿಸಿ ಸುಪಾರಿ ತೆಗೆದುಕೊಂಡ ಐವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ ಕೊಲೆಗೆ ಸುಪಾರಿ ಕೊಟ್ಟ ಆರೋಪಿ ಬೇರೊಬ್ಬನೆ ಆಗಿದ್ದು ಅವನೊಂದಿಗೆ ಸುಪಾರಿ ಪಡೆದ ಐವರಲ್ಲಿ ಇನ್ನೂ ಇಬ್ಬರು ಪರಾರಿಯಾಗಿದ್ದಾರೆ.
1)ಭರಮಾ ಗಂಗಪ್ಪ ಪೂಜೇರಿ, ವಯಸ್ಸು-29 ವರ್ಷ, ಸಾ ॥ ಹುಲ್ಯಾನೂರ ತಾ ಜಿ ಬೆಳಗಾವಿ
2)ಮೌಲಾಲಿ ಮಕ್ತುಮಸಾಬ ಮಕಾನದಾರ,ವಯಸ್ಸು-22 ವರ್ಷ,ಸಾ ॥ ದಾಸ್ತಕೋಪ್ಪ ತಾ।।ಕಿತ್ತೂರ ಜಿ। ಬೆಳಗಾವಿ
3) ಶಂಕರ ಗೋಪಾಲ ಜಾಲಗಾರ, ವಯಸ್ಸು -46 ವರ್ಷ ಸಾ ಕಪಿಲೇಶ್ವರ ಗುಡಿ ಹಿಂದೆ, ಬೆಳಗಾವಿ ಮೂವರು ಬಂಧಿತ ಆರೋಪಿಗಳು.
ಪ್ರಕರಣದಲ್ಲಿ ದಿನಾಂಕ 17/01/2025 ರಂದು 3 ಜನ ಆರೋಪಿತರಿಗೆ ಪತ್ತೆ ಮಾಡಿ ವಿಚಾರಣೆಗೊಳಪಡಿಸಿದಾಗ ಬಂಧಿತ ಮೂವರು ಆರೋಪಿಗಳು ತಾವು ಮತ್ತು ಇನ್ನೂ 3 ಜನ ಕೂಡಿ ಅಪರಾಧ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಮತ್ತು ಬಲ್ಲ ಮೂಲಗಳ ಪ್ರಕಾರ ಸಂಜು ಕಡೋಲ್ಕರ ಎಂಬಾತ ಐವರಿಗೆ ಸುಪಾರಿ ಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ.
ಇವರು ಕೃತ್ಯಕ್ಕೆ ಬಳಸಿದ
1) ಸೆಂಟ್ರೋ ಕಾರ ನಂ. ಕೆ.ಎ 19 ಎನ್. 9815
2) ಒಂದು ಕಂಟ್ರಿ ಮೇಡ್ ಬಂದೂಕ ಹಾಗೂ ಅದಕ್ಕೆ ಬಳಸುವ ಮದ್ದುಗಳು.
3) ಸುಪಾರಿ ಪಡೆದ ಹಣದಲ್ಲಿಂದ 35,000/- ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಪೊಲೀಸ್ ಉಪ ಆಯುಕ್ತರು (ಕಾ&ಸು) ಮತ್ತು ಪೊಲೀಸ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಪೊಲೀಸ ಆಯುಕ್ತರು, ಬೆಳಗಾವಿ ಗ್ರಾಮೀಣ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಮಂಜುನಾಥ ಹಿರೇಮಠ, ಪೊಲೀಸ ನಿರೀಕ್ಷಕರು, ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ ಇವರ ನೇತೃತ್ವದಲ್ಲಿ ಶ್ರೀ. ಲಕ್ಕಪ್ಪ ಎಸ್. ಜೋಡಟ್ಟಿ, ಪಿ.ಎಸ್.ಐ (ಕಾ&ಸು), ಶ್ವೇತಾ, ಪಿ.ಎಸ್.ಐ. ಆದಿತ್ಯ ರಾಜನ್, ಪಿ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಎ.ಎಸ್.ಐ ಎಮ್.ವಿ.ತಳವಾರ, ಎಮ್.ಬಿ.ಕೊಟಬಾಗಿ, ಶ್ರೀಕಾಂತ ಉಪ್ಪಾರ, ಬಾಳೇಶ ಪಡನಾಡ, ಮಹೇಶ ನಾಯಕ, ಸಣ್ಣಪ್ಪ ಹಂಚಿನಮನಿ, ಆನಂದ ಕೋಟಗಿ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿರವರಾದ ಶ್ರೀ. ರಮೇಶ ಅಕ್ಕಿ, ಶ್ರೀ ಮಹಾದೇವ ಕಾಸೀದ ಇವರೆಲ್ಲರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.