ಜನ ಜೀವಾಳ ಜಾಲ: ಪಂಜಾಬ ರಾಜ್ಯದ ಅಮಸ್ಟರ್ ಗುರು ನಾನಕ ವಿಶ್ವವಿದ್ಯಾಲಯದಲ್ಲಿ ನವೆಂಬರ ತಿಂಗಳಲ್ಲಿ ಜರುಗಿದ ಭಾರತೀಯ ಅಖಿಲ್ ಭಾರತ್ ವಿಶ್ವವಿದ್ಯಾಲಯ ಟೆ ಕಾಂಡೋ ಕ್ರೀಡಾ ಸ್ಪರ್ಧೆಯಲ್ಲಿ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಬಿಸಿಎ ವಿಭಾಗ ವಿದ್ಯಾರ್ಥಿ ಕರಣಸೇನ ದೇಸಾಯಿ ಕಂಚಿನ ಪದಕ ಪಡೆದಿದ್ದಾನೆ ಅಂತೆಯೆ ಅಖಿಲ ಭಾರತೀಯ ಮುಕ್ತ ರಾಷ್ಟ್ರೀಯ ಟೆಕ್ವಾಂಡೊ ಪುರುಷರ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯು ಡಿಸೆಂಬರ್ ಎರಡನೇ ವಾರದಲ್ಲಿ ಗೋವಾದಲ್ಲಿ ಜರುಗಿತ್ತು. ಕರಣಸೇನ ದೇಸಾಯಿ ಅಲ್ಲಿಯೂ ಸ್ವರ್ಣ ಪದಕ ಪಡೆದುಕೊಂಡಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅಭಿನಂದಿಸಿ ಸತ್ಕರಿಸಿದರು. ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ, ದೈಹಿಕ ನಿರ್ದೇಶಕರಾದ
ಡಾ. ಶಿವಾನಂದ ಬುಲಬುಲಿ ಉಪಸ್ಥಿತರಿದ್ದರು.