ಬೆಳಗಾವಿ ಬಾವಿಯಲ್ಲಿ ತೇಲುತಿದ್ದ ವ್ಯಕ್ತಿ ಶವ ಪತ್ತೆ..!

ಬೆಳಗಾವಿ ಬಾವಿಯಲ್ಲಿ ತೇಲುತಿದ್ದ ವ್ಯಕ್ತಿ ಶವ ಪತ್ತೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಹೊನಗಾ ಬಾವಿಯಲ್ಲಿ ತೇಲುತಿದ್ದ ವ್ಯಕ್ತಿ ಶವ ಪತ್ತೆ..!

S K ಟ್ಯಾಟು ಪತ್ತೆ ಹಚ್ಚುತ್ತಾ ಮಾಹಿತಿ..?

ಬೆಳಗಾವಿ :  ತಾಲೂಕಿನ ಹೊನಗಾ ಗ್ರಾಮದ ಬೈರು ಕಲ್ಲಪ್ಪಾ ಕಾಕತಕರ ಇವರ ಜಮೀನಿನಲ್ಲಿರುವ ಬಾವಿಯಲ್ಲಿ ತೇಲುತ್ತಿದ್ದ 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯೊರ್ವನ ಶವ ಪತ್ತೆಯಾಗಿದೆ. ಎರಡ್ಮೂರು ದಿನಗಳ ಹಿಂದೆ ವ್ಯಕ್ತಿ ಬಾವಿಯಲ್ಲಿ ಬಿದ್ದಿರುವುದಾಗಿ ಅಂದಾಜಿಸಲಾಗಿದೆ.

ಇಂದು(ಸೋಮವಾರ) ಬೆಳಗ್ಗೆ ಬಾವಿಯ ನೀರಿನಲ್ಲಿ ತೇಲುತ್ತಿರುವ ಅಪರಿಚಿತ ವ್ಯಕ್ತಿಯ ಶವ ಕಂಡ ಜಮೀನು ಮಾಲೀಕ ಬೈರು ಕಲ್ಲಪ್ಪಾ ಕಾಕತಕರ ಕಾಕತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನೆ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ ವ್ಯಕ್ತಿಯ ಶವ ಹೊರ ತೆಗೆದು ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.

ಮೃತ ವ್ಯಕ್ತಿಯ ಕೈ ಮೇಲೆ S K ಎಂದು ಬರೆದಿರುವ ಟ್ಯಾಟೂ ಇದ್ದು ಇದರ ಮೇಲೆ ಹೆಚ್ಚಿನ ಮಾಹಿತಿ ಹುಡುಕಲು ಪೊಲೀಸರು ಮುಂದಾಗಿದ್ದಾರೆ.  ಮೃತನ ಬಗ್ಗೆ ಮಾಹಿತಿ ಬಲ್ಲವರು ತಕ್ಷಣ ಕಾಕತಿ ಪೊಲೀಸರನ್ನು ಸಂಪರ್ಕಿಸಲು ಕೋರಿದ್ದಾರೆ.