ಬೆಳಗಾವಿಯಲ್ಲಿ ರಸ್ತೆ ಅಪಘಾತ ಇಬ್ಬರು ಯುವಕರ ದುರ್ಮರಣ..!

ಬೆಳಗಾವಿಯಲ್ಲಿ ರಸ್ತೆ ಅಪಘಾತ ಇಬ್ಬರು ಯುವಕರ ದುರ್ಮರಣ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ರಸ್ತೆ ಅಪಘಾತ ಇಬ್ಬರು ಯುವಕರ ದುರ್ಮರಣ..!

ಟಿಪ್ಪರ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದ ಸ್ನೇಹಿತರು; ಮಾರಿಹಾಳ ಠಾಣೆಯಲ್ಲಿ ದಾಖಲಾದ ಪ್ರಕರಣ.

ಬೆಳಗಾವಿ: ಬೈಕ್ ಗೆ ಟಿಪ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ದಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಪಂತ ಬಾಳೇಕುಂದ್ರಿಯ ಪಂತ ನಗರ ಬಳಿ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದೆ.

22 ವರ್ಷದ ಸುಳೇಭಾವಿ‌ ಗ್ರಾಮದ ಸೋಮನಾಥ ಪ್ರಭು ಖವಾಶಿ ಹಾಗೂ ಮೂಲತಃ ಕಿತ್ತೂರು ತಾಲೂಕಿನ ಶಿವನೂರು ಗ್ರಾಮದ ಸದ್ಯ ಸುಳೇಭಾವಿ ನಿವಾಸಿ ವಿಠ್ಠಲ ಗಣಪತಿ ಡವಳಿ(22) ಎಂಬುವರು ಅಪಘಾತದಲ್ಲಿ ಮೃತಪಟ್ಟ ಸ್ನೇಹಿತರು.

ಯುವಕರು ಬೆಳಗಾವಿಯಿಂದ ಸುಳೇಭಾವಿಗೆ ಬರುತ್ತಿರುವಾಗ ಎದುರಿನಿಂದ ಮರಳು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಟಿಪ್ಪರ್ ಚಾಲಕ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನ ಟಿಪ್ಪರ್ ಕೆಳಗೆ ಸಿಕ್ಕು ನುಜ್ಜುಗುಜ್ಜಾಗಿದೆ. ಈ ವೇಳೆ  ವಿಠ್ಠಲ ಡವಳಿ ಸ್ಥಳದಲ್ಲಿಯೇ ಮೃತಪ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬ ಯುವಕ ಸೋಮನಾಥನನ್ನು  ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ.

ಈ ಕುರಿತು ಮಾರಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಪಿಐ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆಸಿ ಪರಾರಿಯಾಗುತ್ತಿದ್ದ ಟಿಪ್ಪರ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.