ಮರ ಉರುಳಿ ಯುವಕ ಸಾವು..!

ಮರ ಉರುಳಿ ಯುವಕ ಸಾವು..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮರ ಉರುಳಿ ಯುವಕ ಬಲಿ..!

ಬೆಳಗಾವಿ ನಗರ ಹೃದಯ ಭಾಗದಲ್ಲಿ ನಡೆದ ಘೋರ ಘಟನೆ ..!

ಬೆಳಗಾವಿ:  ನಗರದ ಹೃದಯ ಭಾಗವಾಗಿರುವ ರಾಣಿ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆ ಹೋಗುವ ಮಧ್ಯದಲ್ಲಿರುವ LIC ಕಚೇರಿ ಹಾಗೂ ಮರಾಠಾ ಮಂಡಳ ಕಾಲೇಜ್ ಮುಂದೆ ಬೈಕ್ ಮೇಲೆ ಹೋರಟಿದ್ದ ಯುವಕನ ಮೇಲೆ ವಿಶಾಲವಾದ ಮರವೊಂದು ಬಿದ್ದು ಪರಿಣಾಮ ಬೆಳಗಾವಿ ತಾಲೂಕಿನ ಸಿದ್ದನಹಳ್ಳಿ ಗ್ರಾಮದ 26 ವರ್ಷದ ರಾಕೇಶ್ ಲಗಮಪ್ಪಾ ಸುಲದಾಳ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಮತ್ತೊಂದು ಬೈಕ್ ಮೇಲೆ ಹೋಗುತ್ತಿದ್ದ ವ್ಯಕ್ತಿ ನೇಮಿರಾಜ ಮರೆಪ್ಪನವರ ಗಾಯಗೊಂಡಿದ್ದಾರೆ.

ಈ ಘಟನೆ ಇಂದು (ಮಂಗಳವಾರ) ಬೆಳಗ್ಗೆ ನಡೆದಿದೆ.

ಮಾರ್ಕೆಟ್ ಪೊಲೀಸ್ ಠಾಣೆ ಪಿಐ ತುಳಸಿಗಿರಿ ಹಾಗೂ ಪಿಎಸ್ಐ ವಿಠ್ಠಲ ಹವನ್ನವರ ಘಟನೆ ಸ್ಥಳಕ್ಕೆ ಧಾವಿಸಿ ತನಿಖೆ ಕೈಕೊಂಡಿದ್ದಾರೆ.

ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹದಿಗೆಟ್ಟ ರಸ್ತೆ ಹಾಗೂ ಮರಗಳು ಉರುಳಿ ಮರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಮೇಯರ ಇಲ್ಲದ ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ.