ರಾಯಬಾಗ ತಾಲೂಕಿನ ಸಾರ್ವಜನಿಕರಿಗೆ ಎಚ್ಚರಿಕೆ ಇದು


 

ಬೆಳಗಾವಿ :
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ 110/11ಕೆವಿ ವಿದ್ಯುತ್ ಉಪಕೇಂದ್ರದಿಂದ ಚಾಲ್ತಿಯಲ್ಲಿರುವ 110/11ಕೆವಿ ಮೊರಬ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ. 110/11ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ, ಚಿಂಚಲಿ, ಬೆಕ್ಕೇರಿ, ಭಿರಡಿ, ರಾಯಬಾಗ, ಯಡರ್ವ, ದಿಗ್ಗೇವಾಡಿ, ಹಾಗೂ ಅಕ್ಕಪಕ್ಕದ ಸರಿಹದ್ದಿನಲ್ಲಿ ಬರುವ ಹಳ್ಳಿಗಳು, ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.

ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಜನವರಿ 16 ರಂದು ಇಲ್ಲವೇ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ ಹರಿಬಿಡಬಹುದು. ಕಾರಣ ವಿದ್ಯುತ್ ಗೋಪುರಗಳನ್ನು ಹತ್ತುವಿದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ ಅಥವಾ ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಸಾರ್ವಜನಿಕರು ಮಾಡಬಾರದು ಮತ್ತು ಇದರಿಂದ ಪ್ರಾಣಾಪಾಯಕವಾಗಬಹುದು.

ಒಂದು ವೇಳೆ ಇಂತಹ ಕೃತ್ಯಗಳನ್ಬು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಎಂದು ಬೆಳಗಾವಿಯ ಬೃಹತ್ ಕಾಮಗಾರಿ ವಿಭಾಗ, ಕರ್ನಾಟಕ ವಿದ್ಯುತ್ ಪ್ರಸರಷ ನಿಗಮ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave A Reply

Your email address will not be published.